ಮುಂಬೈ:ಖ್ಯಾತ ಹಿಂದಿ ನಟ ಶಾರೂಕ ಖಾನ್ ಅಭಿನಯದ ಪಠಾಣ ಸಿನಿಮಾ 2 ನೇ ದಿನದಂದು 200 ಕೋಟಿ ರೂಪಾಯಿಗೂ ಅಧಿಕ ಗಳಿಸಿ ಬಾಕ್ಸ ಆಫೀಸ್ ನಲ್ಲಿ ಜಯಭೇರಿ ಬಾರಿಸುತ್ತಿದೆ. ಮೊದಲ ಎರಡು ದಿನ ಬಾಕ್ಸ ಆಫೀಸನಲ್ಲಿ ಪಠಾಣ ಸಿನಿಮಾ 219.6 ಕೋಟಿ ರೂಪಾಯಿ ಸಂಗ್ರಹಿಸಿದೆ.
ಯಶ ರಾಜ ಫಿಲಂಸ್ ನೀಡಿರುವ ಮಾಹಿತಿಯ ಪ್ರಕಾರ ಶಾರೂಕ-ದೀಪಿಕಾ ಪಡುಕೋಣೆ ನಟನೆಯ ಸಿನಿಮಾ 2 ನೇ ದಿನದಂದು 113.6 ಕೋಟಿ ರೂಪಾಯಿ ಗಳಿಸಿದೆ. ಮೊದಲ ದಿನ ಸಿನಿಮಾದ ಗಳಿಕೆ 106 ಕೋಟಿ ರೂಪಾಯಿಯಷ್ಟಿತ್ತು.
ದೇಶೀಯ ಮಾರುಕಟ್ಟೆಯಲ್ಲಿ ಸಿನಿಮಾ ಎರಡನೇ ದಿನದಂದು 70.5 ಕೋಟಿ ರೂಪಾಯಿಗಳನ್ನು ಗಳಿಸಿದೆ. (ಒಟ್ಟು 82.94 ಕೋಟಿ ರೂಪಾಯಿ) ಸಿನಿಮಾದ ಹಿಂದಿ ಆವೃತ್ತಿ 68 ಕೋಟಿ ರೂಪಾಯಿಯನ್ನು ಗಳಿಸಿದ್ದು, ಡಬ್ಬಿಂಗ್ ಆವೃತ್ತಿಯಲ್ಲಿ 2.5 ಕೋಟಿ ರೂಪಾಯಿ ಗಳಿಸಿದೆ. ಪಠಾಣ ಸಿನಿಮಾ ತಮಿಳು ಹಾಗೂ ತೆಲುಗು ಗಳಲ್ಲಿ ಬಿಡುಗಡೆಯಾಗಿದೆ. ಒಂದೇ ದಿನದಲ್ಲಿ ಒಟ್ಟು 70 ಕೋಟಿ ರೂಪಾಯಿ ಗಳಿಸಿದ ಹಿಂದಿ ಸಿನಿಮಾ ಎಂಬ ದಾಖಲೆಯನ್ನೂ ಪಠಾಣ ನಿರ್ಮಿಸಿದೆ.
ವಿದೇಶಗಳಲ್ಲಿ ಈ ಸಿನಿಮಾ ಒಟ್ಟು 30.70 ಕೋಟಿ ರೂಪಾಯಿ ಗಳಿಸಿದೆ. ಬೇಷರಮ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಧರಿಸಿದ್ದರು ಎಂಬ ಕಾರಣಕ್ಕೆ ಸಿದ್ಧಾರ್ಥ ಆನಂದ ಅವರು ನಿರ್ದೇಶಿಸಿರುವ ಈ ಸಿನಿಮಾಗೆ ಬಹಿಷ್ಕಾರದ ಕರೆಗಳನ್ನೂ ನೀಡಲಾಗಿತ್ತು.