ಮಮತಾ ಬ್ಯಾನರ್ಜಿ ಅವರಿಗೆ ಗಂಭೀರ ಗಾಯ; ಪ್ರಾರ್ಥಿಸಲು ಜನರಲ್ಲಿ ಮನವಿ

A B Dharwadkar
ಮಮತಾ ಬ್ಯಾನರ್ಜಿ ಅವರಿಗೆ ಗಂಭೀರ ಗಾಯ; ಪ್ರಾರ್ಥಿಸಲು ಜನರಲ್ಲಿ ಮನವಿ

ಹೊಸದಿಲ್ಲಿ, 14: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವು‌ ಎಕ್ಸ‌ನಲ್ಲಿ ಪೋಸ್ಟ ಮಾಡಿದೆ. ಆಸ್ಪತ್ರೆಯ ಹಾಸಿಗೆಯ ಮೇಲೆ ಮಮತಾ ಬ್ಯಾನರ್ಜಿ ಅವರು ಗಾಯಗೊಂಡು ಮಲಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ನಮ್ಮ ಪಕ್ಷದ ಅಧ್ಯಕ್ಷರಿಗೆ ದೊಡ್ಡ ಪ್ರಮಾಣದ ಗಾಯವಾಗಿದೆ. ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿ ಎಂದು ಪಕ್ಷ ತಿಳಿಸಿದೆ.

ಮಮತಾ ಬ್ಯಾನರ್ಜಿ ಅವರ ಹಣೆಯ ಮಧ್ಯದಲ್ಲಿ ಆಳವಾದ ಗಾಯವಾಗಿ ಮುಖದ ಮೇಲೆ ರಕ್ತ ಸುರಿಯುತ್ತಿದೆ. ಹೇಗೆ ಈ ಅಪಘಾತವಾಯಿತು, ಕಾರಣವೇನು? ಎಂಬ ಮಾಹಿತಿಯನ್ನು ಪಶ್ಚಿಮ ಬಂಗಾಳ ಸರ್ಕಾರ ಮತ್ತು ಪಕ್ಷವು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.

“ನಮ್ಮ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶೀಘ್ರ ಗುಣಮುಖರಾಗಲಿ. ಉತ್ತಮ ಆರೋಗ್ಯ ಅವರದಾಗಲಿ ಎಂದು ನಮ್ಮ ಪ್ರಾರ್ಥನೆಗಳು ಅವರೊಂದಿಗೆ ಇವೆ ” ಎಂದು ತೃಣಮೂಲ ಕಾಂಗ್ರೆಸ್‌ನ ರ ಜ್ಯಾಧ್ಯಕ್ಷ ಸುಕಾಂತ ಮಜುಮದಾರ‌ ಪೋಸ್ಟ‌ ಮಾಡಿದ್ದಾರೆ.

ಮನೆಯ ಬಳಿ ನಡೆದಾಡುವಾಗ ಆಯಾತಪ್ಪಿ ಬಿದ್ದು ಗಾಯ
ಮನೆಯ ಆವರಣದಲ್ಲಿ ನಡೆದಾಡುತ್ತಿರುವ ವೇಳೆ ಆಯ ತಪ್ಪಿ ಬಿದ್ದು ಗಾಯವಾಗಿದೆ ಎಂದು ಹೇಳಲಾಗುತ್ತಿದ್ದು ಬಿದ್ದ ರಭಸಕ್ಕೆ ಮಮತಾ ಅವರ ಹಣೆಗೆ ಗಂಭೀರವಾದ ಗಾಯವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆ ದಾಖಲಿಸಿದಾಗ ವೈದ್ಯರು ಹಣೆಗೆ ಹೊಲಿಗೆ ಹಾಕಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಮುಂದಿನ ತಿಂಗಳು ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಸತತ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ ಅವರು ಪಾಲ್ಗೊಂಡಿದ್ದರು. ಗುರುವಾರವೂ ಓಡಾಟ ಮುಂದುವರೆದಿತ್ತು. ಸಭೆಗಳೆಲ್ಲಾ ಮುಗಿಸಿ ಬಂದು ದಕ್ಷಿಣ ಕೋಲ್ಕತಾದಲ್ಲಿರುವ ತಮ್ಮ ಕಾಲಿಘಾಟ್ ಬಳಿಯ ನಿವಾಸಕ್ಕೆ ಆಮಿಸಿದ ಮಮತಾ ಕೆಲ ಹೊತ್ತು ವಿಶ್ರಾಂತಿ ಪಡೆದಿದ್ದರು ಎನ್ನಲಾಗಿದ್ದು ನಂತರ ನಡೆದಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.