ಬೆಂಗಳೂರು: ಕೈಲಾಸ ಎಂಬ ಪ್ರತ್ಯೇಕ ನಾಡನ್ನು ನಿರ್ಮಿಸಿ ತನ್ನದೇ ಆದ ರಾಷ್ಟ್ರಧ್ವಜ, ಕರೆನ್ಸಿ, ಪಾಸಪೋರ್ಟ ವ್ಯವಸ್ಥೆ ಇತ್ಯಾದಿಗಳನ್ನು ರೂಪಿಸಿದ ಬಿಡದಿ ಸ್ವಾಮಿ ನಿತ್ಯಾನಂದ ಈಗ ಜಗತ್ತಿನ ಎಲ್ಲ ಗರ್ಭಿಣಿಯರಿಗೆ ಬರುವಂತೆ ಸಲಹೆ ನೀಡಿದ್ದಾನೆ.
ವೀಡಿಯೋ ಕ್ಲಿಪ್ನ ಆರಂಭದಲ್ಲಿ ಕೈಲಾಸದಲ್ಲಿ ಶೀಘ್ರದಲ್ಲೇ ಶಾಶ್ವತ ಕಾಸ್ಮಿಕ್ ವಿಮಾನ ನಿಲ್ದಾಣ ಮತ್ತು ಇಡೀ ವಿಶ್ವಕ್ಕೆ ಮೀಸಲಾದ ಹೆರಿಗೆ ಆಸ್ಪತ್ರೆಯನ್ನು ನಿರ್ಮಿಸಲಾಗುವುದು ಎಂದು ಹೇಳಿದ್ದಾನೆ.
ಇಲ್ಲಿ ಹುಟ್ಟುವ ಪ್ರತಿ ಮಗುವಿಗೆ ಪ್ರೌಢ ಅಲೌಕಿಕ ಪ್ರಕಾಶಮಾನವಾದ ಶಕ್ತಿಯ ಡಿಎನ್ಎ ಅಳವಡಿಸಲಾಗಿದೆ. ಇದರ ಜೊತೆಗೆ, ಬ್ರಹ್ಮನಿಗೆ ಆನುವಂಶಿಕ ಸಂಕೇತವನ್ನು ನೀಡಲಾಗುತ್ತದೆ ಅಂತ ತಿಳಿಸಿದ್ದಾರೆ.