ರಾಂಚಿ: ಬಿಹಾರದ ವಿಶ್ವವಿದ್ಯಾಲಯದ ಎಕ್ಸಾಂ ಪ್ರವೇಶ ಪತ್ರದಲ್ಲಿ ನರೇಂದ್ರ ಮೋದಿ ಭಾವಚಿತ್ರ ಕಂಡು ಬಂದಿವೆ. ಈ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಈ ಚಿತ್ರಗಳಿಗೆ ಸಂಬಂಧಿಸಿದಂತೆ, ವಿಶ್ವವಿದ್ಯಾಲಯದ ಕುಲಸಚಿವರು ಮಾಧ್ಯಮಗಳಿಗೆ ನೀಡಿರುವ ಮಾಹಿತಿಯಲ್ಲಿ ಇದು ಯಾರದೋ ಕಿಡಿಗೇಡಿತನವೆಂದು ತೋರುತ್ತದೆ ಎಂದು ಹೇಳಿದ್ದಾರೆ.
ವಿಶ್ವವಿದ್ಯಾಲಯವು ಇತ್ತೀಚೆಗೆ ಪರೀಕ್ಷಾರ್ಥಿಗಳಿಗೆ ಪ್ರವೇಶ ಪತ್ರಗಳನ್ನು ವಿತರಿಸಿತು. ಅವುಗಳಲ್ಲಿ ಪ್ರಧಾನಿ, ಧೋನಿ ಮತ್ತು ಚೌಹಾಣ ಅವರ ಚಿತ್ರಗಳು ಕಂಡು ಬಂದವು.
ಈ ಎಲ್ಲಾ ಅಭ್ಯರ್ಥಿಗಳು ಮಧುಬನಿ, ಸಮಸ್ತಿಪುರ ಮತ್ತು ಬೇಗುಸರಾಯ್ ಜಿಲ್ಲೆಗಳ ಕಾಲೇಜುಗಳ ಬಿಎ ಮೂರನೇ ವರ್ಷದ ವಿದ್ಯಾರ್ಥಿಗಳಾಗಿದ್ದು, ಎಲ್ಲಾ ಕಾಲೇಜುಗಳು ಲಲಿತ ನಾರಾಯಣ್ ಮಿಥಿಲಾ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿವೆ, ಇದು ದರ್ಭಾಂಗದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.