ಮುಧೋಳ : ಬೇರೆ ರಾಜ್ಯಗಳಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದ ಲಾಡ್ಜ್ ಗಳ ಮೇಲೆ ದಾಳಿ ನಡೆಸಿದ ಪೊಲೀಸರು 10 ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.
ನಗರದ ಶಿವದುರ್ಗಾ, ಸುರಭಿ, ಓಂಕಾರ ಹಾಗೂ ಸಪ್ತಗಿರಿ ಲಾಜ್ ಗಳ ಮೇಲೆ ದಾಳಿ ನಡೆಸಿದ ಪೊಲೀಸರು ಅಸ್ಸಾಂ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಹಾಗೂ ಕರ್ನಾಟಕ ಮೂಲದ ಯುವತಿಯರನ್ನು ರಕ್ಷಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮುಧೋಳ ನಗರ ಠಾಣೆಯಲ್ಲಿ 11ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ದಾಳಿ ಕಾರ್ಯದಲ್ಲಿ ಪಾಲ್ಗೊಂಡಿದ್ದ ಡಿವೈಎಸ್ಪಿ ಶಾಂತವೀರ ಈ., ಸಿಪಿಐ ಮಹಾದೇವ ಶಿರಹಟ್ಟಿ, ಪಿಎಸ್ಐಗಳಾದ ಅಜಿತಕುಮಾರ ಹೊಸಮನಿ, ಕೆ.ಬಿ.ಮಾಂಗ, ಸಿದ್ದಪ್ಪ ಯಡಹಳ್ಳಿ ಪೊಲೀಸ್ ಸಿಬ್ಬಂದಿ ಆರ್.ಬಿ.ಕಟಗೇರಿ, ಜೆ.ಸಿ. ದಳವಾಯಿ, ಎನ್.ಎಂ. ಜಮಖಂಡಿ, ಬಿ.ಡಿ. ಕುರಿ, ಎಸ್.ಪಿ. ರಾಠೋಡ, ಪಿ.ಎಂ. ಅಗಸರ, ಹನಮಂತ ಮಾದರ, ಎಂ.ಬಿ.ದಳವಾಯಿ, ಆರ್.ಎಂ.ಹೆಗ್ಗೋಡ, ಎಂ.ಕೆ.ಯೆಳೆಂಟಿ, ಆರ್.ಎಸ್.ಕೋಲಕಾರ, ಡಿ.ಎಲ್.ನದಾಫ, ಜಿ.ಎಂ.ನಾಯ್ಕರ, ದಾದಾಪೀರ ಅತ್ರಾವತ, ಎಸ್.ಪಿ. ಕೆಸರಗೊಪ್ಪ, ಎಚ್.ವೈ.ಕೋಳಿ, ಆರ್.ಆರ್. ಮುನ್ಯಾಳ, ಆರ್.ಎಸ್.ತಳವಾರ,ಶ್ರೀಕಾಂತ ಬೆನಕಟ್ಟಿ, ಎಸ್.ಎಂ.ಭದ್ರಶೆಟ್ಟಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಸಿಬ್ಬಂದಿಗೆ ಸೂಕ್ತ ಬಹುಮಾನ ಘೋಷಿಸಿದ್ದಾರೆ