ಬೆಳಗಾವಿ, ಸೆ. 2- ಪದವಿ ಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ್ದ ಪಿಯುಸಿ-1 ಮತ್ತು ದ್ವಿತೀಯ-2 ವಿದ್ಯಾರ್ಥಿಗಳ 2023-24ನೇ ಸಾಲಿನ ಜಿಲ್ಲಾ ಮಟ್ಟದ ವಿವಿಧ ಕ್ರೀಡಾಕೂಟದಲ್ಲಿ ಬೆಳಗಾವಿಯ ಪ್ರತಿಷ್ಠಿತ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ (ಆರ್ ಎಲ್ ಎಸ್) ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದಿದ್ದು ಅದರಲ್ಲಿ 25 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಟೇಬಲ್ ಟೆನ್ನಿಸ್ ಕ್ರೀಡಾಕೂಟದಲ್ಲಿ ಬಾಲಕರ ವಿಭಾಗದಲ್ಲಿ ಶ್ರೇಯಸ್ ಕಾಕಡೆ, ಪಾರ್ಥ ಗಾವಡೆ, ಆದಿತ್ಯಾ ಭಟ್, ಮತ್ತು ಕೃಷ್ಣಾ ಮೇಖಲಿ ಮತ್ತು ಬಾಲಕಿಯರ ವಿಭಾಗದಲ್ಲಿ ಸ್ವರಾ ಪವಾರ, ಮಾನ್ಯ ಚೌಗಲೆ, ಅಪೂರ್ವ ಪ್ರಭು, ಕೃತಿಕಾ ಹಿರೇಮಠ ಅವರು ಗೆಲುವು ಸಾಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕುಮಾರಿ. ಸ್ವರಾ ಜಿ. ಪವಾರ ಅತ್ಯುತ್ತಮ ಆಟಗಾರ್ತಿ ಎಂಬ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾಳೆ.
ಈಜು ಸ್ಪರ್ಧೆಯಲ್ಲಿ ಪ್ರಜಕ್ತಾ ಅನಗೋಳಕರ ಅವರು ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು, ಪದಕ ಸ್ವೀಕರಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಕರಾಟೆ ಸ್ಪರ್ಧೆಗಳಲ್ಲಿ ಕುಮಾರಿ ರಿತು ಪಾಟೀಲ ಬ್ರೌನ್ ಬೆಲ್ಟದಲ್ಲಿ ಮತ್ತು ಪ್ರಗತಿ ಸುಂಟಕರ ಬ್ಲೂ ಬೆಲ್ಟದಲ್ಲಿ, ನಿವೇದಿತಾ ಇಂಗಳಗಿ ಗ್ರೀನ್ ಬೆಲ್ಟ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಫುಟ್ಬಾಲ್ ಕ್ರೀಡಾಕೂಟದಲ್ಲಿ ಬಾಲಕಿಯರ ವಿಭಾಗದಲ್ಲಿ ಅಪರ್ಣಾ ಹರೇರ, ರಿತು ಪಾಟೀಲ, ಅಲಿಶಾ ಬೊರ್ಗೆಸ್, ಮಂಜುಷಾ ಪಾಟೀಲ, ಸಮೃದ್ಧಿ ವಹಳ ಜಿಲ್ಲಾ ಮಟ್ಟದಲ್ಲಿ ಪ್ರಥಮಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕುಮಾರ ಮಂಥನ ಪಗಾರೆ ಮತ್ತು ರಝೀನ ಅಹ್ಮದ ಟಿ. ಜಮಾದಾರ ಜಿಲ್ಲಾ ಮಟ್ಟದ ಬಾಕ್ಸಿಂಗ್ ಕ್ರೀಡಾಕೂಟದಲ್ಲಿ ವಿಜೇತರಾಗಿ ಚಿನ್ನದ ಪದಕ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟದ ಬಾಸ್ಕೇಟ್ಬಾಲ್ ಕ್ರೀಡಾಕೂಟದಲ್ಲಿ ಬಾಲಕರ ವಿಭಾಗದಲ್ಲಿ ಸಾತ್ವಿಕ ಶೆಟ್ಟರ, ದಕ್ಷ ಚೌಗಲೆ, ತಹಾ ಖಾನ್, ಆದಿತ್ಯಾ ಪಾಟೀಲ, ಬಾಲಕಿಯರ ವಿಭಾಗದಲ್ಲಿ ಓಜಲ್ ಭವಾನೆ, ಶ್ರೇಯಾ ಸೊಬರದ, ಸಾಯಲಿ ಪಾಟೀಲ ಅವರುಗಳು ವಿಜೇತರಾಗಿ ರನ್ನರ್ಸ್ ಸ್ಥಾನ ಪಡೆದು ರಾಜ್ಯ ಮಟ್ಟದ ಬಾಸ್ಕೆಟಬಾಲ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹಾಗೂ ಸದಸ್ಯರು, ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಹಾಗೂ ಸದಸ್ಯರು, ಕೆಎಲ್ಇ ಸಂಸ್ಥೆಯ ಆಜೀವ ಸದಸ್ಯ ನಂಜಪ್ಪನವರ ಅವರು, ಮಹಾವಿದ್ಯಾಲಯದ ಪ್ರಾಚಾರ್ಯರು, ಉಪಪ್ರಾಚಾರ್ಯರು ಹಾಗೂ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ಪ್ರಾಚಾರ್ಯ ವ್ಹಿ.ಸಿ.ಕಾಮಗೋಳ, ಪದವಿ ಪ್ರಾಚಾರ್ಯರಾದ ಡಾ.(ಶ್ರೀಮತಿ) ಜೆ.ಎಸ್.ಕವಳೇಕರ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಶಿವಾನಂದ ಬುಲಬುಲಿ ಹಾಗೂ ಎನ್.ಎಮ್. ಪಾಟೀಲ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದು ಅವರಿಗೂ ಅಭಿನಂದನೆ ಸಲ್ಲಿಸಿದ್ದಾರೆ.