ಹೊಸದಿಲ್ಲಿ, ೭- ರೈಲ್ವೇ ಇಲಾಖೆಯು ಈಗ ಪೇಪರ್ ರಹಿತ ವ್ಯವಸ್ಥೆ ತರಲು ಮುಂದಾಗಿದ್ದು ಭಾರರತೀಯ ರೈಲ್ವೇ ಇಲಾಖೆಯು ಶೀಘ್ರವಾಗಿ ಕಾಗದ ರಹಿತ ಇಲಾಖೆಯಾಗಲಿದೆ. ಪರಿಣಾಮಕಾರಿಯಾಗಿ ಹಾಗೂ ತ್ವರಿತವಾಗಿ ಕೆಲಸ ಮಾಡಬೇಕು ಎಂಬ ನಿಟ್ಟಿನಲ್ಲಿ ಈ ನಿರ್ಧಾರ ಮಾಡಿದೆ ಸರ್ಕಾರ. ಈಗಾಗಲೇ ಅಂದರೆ ನವೆಂಬರ್ 1 ರಿಂದಲೇ ವ್ಯವಹಾರ ಹಾಗೂ ಕಡತ ಪ್ರಕ್ರಿಯೆಯಲ್ಲಿ ಡಿಜಿಟಲೀಕರಣ ಮಾಡಲಾಗುತ್ತಿದೆ.
ಕೆಲಸದಲ್ಲಿ ಡಿಜಿಟಲೀಕರಣ ಮಾಡುವಂತೆ ಎಲ್ಲಾ ಮ್ಯಾನೇಜರ್ ಗಳಿಗೆ ತಿಳಿಸಲಾಗಿದೆ ಎಂದು ರೈಲ್ವೇ ಮಂಡಳಿಯ ಮುಖ್ಯಸ್ಥ ತ್ರಿಪಾಠಿ ತಿಳಿಸಿದ್ದಾರೆ. ಇನ್ನು ಬಹುತೇಕ ಎಲ್ಲಾ ಕೆಲಸದಲ್ಲಿ ಕಾಗದ ರಹಿತ ಇರಲಿದ್ದು, ಕೆಲವೇ ಕೆಲವು ಸಂದರ್ಭಗಳಲ್ಲಿ ಮಾತ್ರ ಕಾಗದ ಕಡತಗಳಿಗೆ ಅವಕಾಶ ಸಿಗಲಿದೆಯಂತೆ.