ರಾಜೀವ ಗಾಂಧಿ ಹತ್ಯೆ ಅಪರಾಧಿ ಆಸ್ಪತ್ರೆಯಲ್ಲಿ ನಿಧನ

A B Dharwadkar
ರಾಜೀವ ಗಾಂಧಿ ಹತ್ಯೆ ಅಪರಾಧಿ ಆಸ್ಪತ್ರೆಯಲ್ಲಿ ನಿಧನ

ಹೊಸದಿಲ್ಲಿ, ೨೮: ಮಾಜಿ ಪ್ರಧಾನಿ  ರಾಜೀವ ಗಾಂಧಿ ಹತ್ಯೆ ಪ್ರಕರಣದಲ್ಲಿ 30 ವರ್ಷಗಳ ಜೈಲುವಾಸ ಅನುಭವಿಸಿ ಬಿಡುಗಡೆಯಾಗಿದ್ದ ಅಪರಾಧಿಗಳಲ್ಲಿ ಒಬ್ಬರಾದ ಟಿ ಸುತೇಂದ್ರರಾಜ ಅಲಿಯಾಸ್ ಸಂತನ್ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ನಿಧನನಾಗಿದ್ದಾನೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಏಳು ಆರೋಪಿಗಳಲ್ಲಿ ಶ್ರೀಲಂಕಾದ ಸಂತನ್ ಒಬ್ಬ ಆಗಿದ್ದ. ಸಂತನ್ ಅವರನ್ನು ತಿರುಚ್ಚಿ ಕೇಂದ್ರ ಕಾರಾಗೃಹದ ಸ್ಪೆಷಲ್ ಕ್ಯಾಂಪ್​ನಲ್ಲಿ ಇರಿಸಲಾಗಿತ್ತು. ಈ ವೇಳೆ ಅನಾರೋಗ್ಯಕ್ಕೆ ಒಳಗಾಗಿದ್ದ.

ಆತನಿಗೆ ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇದ್ದುದರಿಂದ ಕಳೆದ ವಾರ, ಕೇಂದ್ರ ವಿದೇಶಾಂಗ ಸಚಿವಾಲಯದ ಅಡಿಯಲ್ಲಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ 56 ವರ್ಷದ ಸಂತನ್‌ಗೆ ತುರ್ತು ಪ್ರಯಾಣದ ದಾಖಲೆಯನ್ನು ಒದಗಿಸಿ, ಕಳೆದ ವಾರ ಶ್ರೀಲಂಕಾಕ್ಕೆ ತ್ವರಿತ ವಾಪಸಾತಿಗೆ ಅವಕಾಶ ಮಾಡಿಕೊಟ್ಟಿದ್ದರು. ಆದರೆ ಕಳೆದ ಸೋಮವಾರ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.

ಸಂತಾನ್ ವಕೀಲ ಪುಗಜೆಂಧಿ “ದಿ ನ್ಯೂಸ್ ಮಿನಿಟ್‌” ಗೆ ಮಾಹಿತಿ ನೀಡಿದ್ದು, “ಸಂತನ್ ನಿಧನ ಆದಾಗ ಅವರ ಸಹೋದರ ಆಸ್ಪತ್ರೆಯಲ್ಲಿದ್ದರು. ಅಂತಿಮ ವಿಧಿವಿಧಾನಗಳಿಗಾಗಿ ಪಾರ್ಥಿವ ಶರೀರವನ್ನು ಶ್ರೀಲಂಕಾದಲ್ಲಿರುವ ಅವರ ಮನೆಗೆ ಕೊಂಡೊಯ್ಯಲಾಗುತ್ತದೆ ಎಂದು ಹೇಳಿದ್ದಾರೆ.

ಮಾಜಿ ಪ್ರಧಾನಿ ರಾಜೀವ ಗಾಂಧಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೇ 1999 ರಲ್ಲಿ, ಮುರುಗನ್, ಸಂತನ್, ಪೆರಾರಿವಾಲನ್ ಮತ್ತು ನಳಿನಿ ಅವರ ಮರಣದಂಡನೆಯನ್ನು ದೃಢೀಕರಿಸುವಾಗ ಮತ್ತು ಪಯಸ್, ರವಿಚಂದ್ರನ್ ಮತ್ತು ಜಯಕುಮಾರ್ ಅವರ ಮರಣದಂಡನೆಯನ್ನು ಜೀವಾವಧಿಗೆ ಇಳಿಸುವ ಸಂದರ್ಭದಲ್ಲಿ ರಾಜೀವ ಗಾಂಧಿಯವರ ಹತ್ಯೆಯಲ್ಲಿ ಬಂಧಿತರಾದ 26 ಆರೋಪಿಗಳಲ್ಲಿ 19 ಮಂದಿಯನ್ನು ಸುಪ್ರೀಮ ಕೋರ್ಟ ಖುಲಾಸೆಗೊಳಿಸಿತ್ತು.

ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳ ಈಳಂ (ಎಲ್‌ಟಿಟಿಇ) ಜೊತೆ ಸಂಯೋಜಿತವಾಗಿರುವ ಆತ್ಮಹತ್ಯಾ ಬಾಂಬರ್ ನಡೆಸಿದ ನಂತರ ಎಲ್ಲ ಏಳು ವ್ಯಕ್ತಿಗಳನ್ನು ಬಂಧಿಸಲಾಗಿತ್ತು.

ಇದಾದ ಬಳಿಕ ನವೆಂಬರ್ 2022 ರಲ್ಲಿ ಸಂತಾನ್ ನನ್ನು ಸುಪ್ರೀಮ ಕೋರ್ಟ ಬಿಡುಗಡೆ ಮಾಡಿತ್ತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.