ರಾಜ್ಯೋತ್ಸವ ದಿನ ಸಮದರ್ಶಿ ಸಂಪಾದಕ ಎ.ಬಿ.ಧಾರವಾಡಕರ ಸೇರಿ ಬೆಳಗಾವಿ ಜಿಲ್ಲೆಯ ಹಲವು ಪತ್ರಕರ್ತರಿಗೆ ಸನ್ಮಾನ

A B Dharwadkar
ರಾಜ್ಯೋತ್ಸವ ದಿನ ಸಮದರ್ಶಿ ಸಂಪಾದಕ ಎ.ಬಿ.ಧಾರವಾಡಕರ ಸೇರಿ ಬೆಳಗಾವಿ ಜಿಲ್ಲೆಯ ಹಲವು ಪತ್ರಕರ್ತರಿಗೆ ಸನ್ಮಾನ

ಬೆಳಗಾವಿ ಅ. 30 : ಬೆಳಗಾವಿ ಜಿಲ್ಲಾ ಮಾಧ್ಯಮ ವಿಭಾಗದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದ್ದು ಸಮದರ್ಶಿ ದಿನಪತ್ರಿಕೆಯ ಸಂಪಾದಕ ಎ.ಬಿ.ಧಾರವಾಡಕರ ಸೇರಿದಂತೆ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ವಿವಿಧ ವಿಭಾಗಗಗಳ 11 ಜನ ಪತ್ರಕರ್ತರಿಗೆ ಕರ್ನಾಟಕ ರಾಜ್ಯೋತ್ಸವ-2024ರ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ನವೆಂಬರ 1 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಲಿರುವ ಕನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು.

ಸನ್ಮಾನಗೊಳ್ಳುವವರ ವಿವರ:

ಜಿಲ್ಲಾ/ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರುಗಳ ವಿಭಾಗ:
ಸಮದರ್ಶಿ ದಿನಪತ್ರಿಕೆಯ ಸಂಪಾದಕರಾದ ಅಶ್ರಫ ಬಾಬಾಸಾಬ ಧಾರವಾಡಕರ

ಮುದ್ರಣ ಮಾಧ್ಯಮ ವಿಭಾಗ: ಪಿ.ಟಿ.ಐ. ಸುದ್ದಿ ಸಂಸ್ಥೆ ವರದಿಗಾರರಾದ ಸುಭಾಷ ಮದ್ಧುರಾವ ಕುಲಕರ್ಣಿ ಹಾಗೂ ಉದಯವಾಣಿ ದಿನಪತ್ರಿಕೆಯ ಜಿಲ್ಲಾ ಹಿರಿಯ ವರದಿಗಾರರಾದ ಭೈರೋಬಾ ಶಿವಾಜಿ ಕಾಂಬಳೆ

ಪತ್ರಿಕಾ ಛಾಯಾಗ್ರಾಹಕರ ವಿಭಾಗ: ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆ ಛಾಯಾಗ್ರಾಹಕರಾದ ಏಕನಾಥ ರಾಮಚಂದ್ರ ಅಗಸಿಮನಿ.
ವಿದ್ಯುನ್ಮಾನ ಮಾಧ್ಯಮ ವಿಭಾಗ: ಪ್ರಜಾ ಟಿ.ವಿ. ಜಿಲ್ಲಾ ವರದಿಗಾರರಾದ ಚಂದ್ರು ಹಣಮಂತ ಶ್ರೀರಾಮುಡು ಮತ್ತು ಚಿಕ್ಕೋಡಿ ಸುವರ್ಣ ನ್ಯೂಸ್ ವರದಿಗಾರರಾದ ಮುಸ್ತಾಕ ಅಹ್ಮದ ಸಯ್ಯದ ಹುಸೇನ್ ಪೀರಜಾದೆ.

ಟಿವಿ ಕ್ಯಾಮರಾಮೆನ್ ವಿಭಾಗ: ನ್ಯೂಸ್ ಫರ್ಸ್ಟ ಕ್ಯಾಮೆರಾಮನ್ ರೋಹಿತ ನಾರಾಯಣ ಶಿಂಧೆ ಮತ್ತು ಇನ್ ನ್ಯೂಸ್ ಛಾಯಾಗ್ರಾಹಕ ಸುಭಾನಿ ಇಮಾಮಸಾಬ ಮುಲ್ಲಾ.

ತಾಲೂಕು ವರದಿಗಾರರ ವಿಭಾಗ: ಚನ್ನಮ್ಮನ ಕಿತ್ತೂರಿನ ಪ್ರಜಾವಾಣಿ ದಿನಪತ್ರಿಕೆಯ ತಾಲೂಕು ವರದಿಗಾರರಾದ ಪ್ರದೀಪ ನೀಲಕಂಧರ ಮೇಲಿನಮನಿ ಮತ್ತು ಕಾಗವಾಡ ತಾಲೂಕಿನ ಸಂಯುಕ್ತ ಕರ್ನಾಟಕ ಹಾಗೂ ಕನ್ನಡಪ್ರಭ ದಿನಪತ್ರಿಕೆಯ ತಾಲೂಕು ವರದಿಗಾರರಾದ ಸಿದ್ಧಯ್ಯ ಗಂಗಯ್ಯ ಹಿರೇಮಠ.

ಪತ್ರಿಕಾ ವಿತರಕರ ವಿಭಾಗ: ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಸದೆಪ್ಪ ಫಕೀರಪ್ಪ ಗರಗದ

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿದ ಕರ್ನಾಟಕ ರಾಜ್ಯೋತ್ಸವ-2024ರ ಮಾಧ್ಯಮ ಪ್ರತಿನಿಧಿಗಳ ಸನ್ಮಾನ ಆಯ್ಕೆ ಸಮಿತಿ ಸಭೆಯಲ್ಲಿ ಈ 11 ಜನ ಪತ್ರಕರ್ತರನ್ನು ಸನ್ಮಾನಿಸಲು ಸರ್ವಾನುಮತದಿಂದ ತೀರ್ಮಾನಿಸಲಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.