ಬೆಳಗಾವಿ, ೪: ಬೆಳಗಾವಿ ಜಿಲ್ಲಾ ಬಿಜೆಪಿ ಎಸ್ ಸಿ ಮೋರ್ಚಾ ಕಾರ್ಯಕರ್ತ ಹಾಗು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರ ಆಪ್ತ ಪೃಥ್ವಿ ಸಿಂಗ್ ಅವರಿಗೆ ಚಾಕುವಿನಿಂದ ಇರಿಯಲಾಗಿದೆ.
ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಪೃಥ್ವಿ ಸಿಂಗ್ ಅವರು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, “ತಮ್ಮ ಮೇಲಾದ ಹಲ್ಲೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಕಾರಣ” ಎಂದು ಆರೋಪಿಸಿದ್ದಾರೆ. 55 ವರ್ಷದ ಪೃಥ್ವಿಸಿಂಗ್ ಅವರ ಎಡಗೈ ಮತ್ತು ಕುತ್ತಿಗಿಗೆ ಗಾಯಗಳಾಗಿವೆ.
ಆದರೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಆರೋಪ ನಿರಾಕರಿಸಿ, ಪೊಲೀಸರು ತನಿಖೆ ಮಾಡಲಿ ಎಂದು ತಿಳಿಸಿದ್ದಾರೆ. ಪೃಥ್ವಿಸಿಂಗ್ ಅವರ ಬಳಿಯಿಂದ ಒಂದು ದಾಖಲೆ ಪತ್ರ ಪಡೆಯಲು ತಮ್ಮ ಕಡೆಯ ಒಂದಿಬ್ಬರು ಹಿಂಡಲಗಾ ಸಮೀಪದ ಜಯನಗರದಲ್ಲಿ ಅವರ ನಿವಾಸಕ್ಕೆ ತೆರಳಿದ್ದರು. ಆಗ ಅವರು ಕೇಸರಿ ಬಣ್ಣದ ಟಿ ಶರ್ಟ ಧರಿಸಿದ್ದರು. ಆದರೆ ಈಗ ಚಾಕುವಿನಿಂದ ಇರಿಯಲಾಗಿದೆ ಎಂದು ವಿಡಿಯೋ ರೆಕಾರ್ಡಿಂಗ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಅವರು ಧರಿಸಿಕೊಂಡಿದ್ದು ಬಿಳಿ ಬಣ್ಣದ ಶರ್ಟ. ಇದೆಲ್ಲ ಸಿಸಿಟಿವಿ ದೃಶ್ಯದಲ್ಲಿ ದಾಖಲಾಗಿದೆ ಎಂದು ಸಚಿವೆ ಲಕ್ಷ್ಮಿ ತಿಳಿಸಿದ್ದಾರೆ.
ಕೆಎಲ್ ಇ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಾಗಿರುವ ಪೃಥ್ವಿಸಿಂಗ್ ಅವರನ್ನು ಬಿಜೆಪಿ ಅಧ್ಯಕ್ಷ, ಶಾಸಕ ವಿಜಯೇಂದ್ರ ಸೇರಿದಂತೆ ಬಿಜೆಪಿ ಶಾಸಕರು ಹೋಗಿದ್ದರು.