ಬೆಂಗಳೂರು, ಮೇ ೨೩: ಬೆಂಗಳೂರಿನ ಹೊರವಲಯದಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಪಾರ್ಟಿಯಲ್ಲಿ ಭಾಗಿಯಾಗಿದ್ದ ತೆಲುಗು ನಟಿ ಹೇಮಾ ಸೇರಿದಂತೆ 86 ಜನರ ಬ್ಲಡ್ ರಿಪೋರ್ಟ್ ನಲ್ಲಿ ಡ್ರಗ್ ಪಾಸಿಟಿವ್ ಬಂದಿದೆ.
ಎಲೆಕ್ಟ್ರಾನಿಕ್ ಸಿಟಿ ಸಮೀಪದ ಜಿ.ಆರ್ ಫಾರ್ಮ ಹೌಸನಲ್ಲಿ ವಾಸು ಎಂಬಾತನ ಹುಟ್ಟುಹಬ್ಬದ ನೆಪದಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ರೇವ್ ಪಾರ್ಟಿ ಮಾಡುತ್ತಿದ್ದ 103 ಮಂದಿಯ ಪೈಕಿ 86 ಮಂದಿ ಮಾದಕ ವಸ್ತು ಸೇವಿಸಿರುವುದು ದೃಢ ಪಟ್ಟಿದೆ. ಇದರಲ್ಲಿ 73 ಮಂದಿ ಪುರುಷರಲ್ಲಿ 56 ಹಾಗೂ 30 ಮಂದಿ ಯುವತಿಯರ ಬ್ಲಡ್ ರಿಪೋರ್ಟ್ ಪಾಸಿಟಿವ್ ಬಂದಿದೆ.
ಮುಖ್ಯವಾಗಿ ತೆಲುಗು ನಟಿ ಹೇಮಾ ಅವರ ರಿಪೋರ್ಟ ಕೂಡ ಪಾಸಿಟಿವ್ ಬಂದಿದೆ. ಈ ಮೂಲಕ ತೆಲುಗು ನಟಿ ಹೇಮಾ ಡ್ರಗ್ಸ ಸೇವಿಸಿರುವುದು ದೃಢಪಟ್ಟಿದೆ. ರೇವ್ ಪಾರ್ಟಿಯಲ್ಲಿ ದೊಡ್ಡ ಮಟ್ಟದ ಮಾದಕ ವಸ್ತು ಬಳಕೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ವಾಸು ಆಯೋಜಿಸಿದ್ದ ಪಾರ್ಟಿಯಲ್ಲಿ ದಾಳಿಯ ವೇಳೆ ಎಂಡಿಎಂಎ, ಕೊಕೇನ್, ಹೈಡ್ರೋಗಾಂಜಾಗಳು ಪತ್ತೆಯಾಗಿದ್ದು, ಸನ್ ಸೆಟ್ ಟು ಸನ್ ರೈಸ್ ಪಾರ್ಟಿ ಎಂದು ರೇವ್ ಪಾರ್ಟಿಗೆ ಹೆಸರಿಡಲಾಗಿತ್ತು. ಇನ್ನು ಬ್ಲಡ್ ರಿಪೋರ್ಟನಲ್ಲಿ ಪಾಸಿಟಿವ್ ಬಂದವರಿಗೆ ಸಿಸಿಬಿ ನೋಟಿಸ್ ಕಳುಹಿಸಲಾಗಿದ್ದು, ನೋಟಿಸ್ ನೀಡಿದವರ ವಿಚಾರಣೆಯನ್ನು ಸಿಸಿಬಿ ಅಧಿಕಾರಿಗಳು ನಡೆಸಲು ತೀರ್ಮಾನಿಸಿದ್ದಾರೆ.