ಬೆಳಗಾವಿ : ಅಪರಾಧಿಗಳಿಗೆ ಸಿಂಹಸ್ವಪ್ನರಾಗಿದ್ದ ದಕ್ಷ ನಿವೃತ್ತ ಪೊಲೀಸ ಸಬ್ ಇನ್ಸಪೆಕ್ಟರ್ ಅಮೀರಖಾನ್ ಮೊಕಾಶಿ ಅವರು ಗುರುವಾರ ಸಂಜೆ ಸ್ವರ್ಗಸ್ತರಾದರು.
ಕೆಲದಿನಗಳಿಂದ ಅನಾರೋಗ್ಯದಿಂದಿದ್ದ ಅವರು, ಹನುಮಾನ ನಗರದ ನಿವಾಸದಲ್ಲಿ ಕೊನೆಯುಸಿರೆಳೆದರು ಎಂದು ತಿಳಿಸಲು ದುಃಖವೆನಿಸುತ್ತಿದೆ.
ಯಾವುದೇ ರಾಜಕೀಯ ಒತ್ತಡಕ್ಕೊಳಗಾಗದೇ ಶಿಸ್ತಿನಿಂದ ತಮ್ಮ ಕರ್ತವ್ಯ ನಿರ್ವಹಿಸಿದ್ದ ಅವರು, ಪಿಎಸ್ ಐ ಹುದ್ದೆಯ ಘನತೆ ಏನೆಂಬುದನ್ನು ತೋರಿಸಿದ್ದರು. ಗೋಕಾಕ ಜನರು ಇಂದಿಗೂ ದಿವಂಗತ ಮೊಕಾಶಿ ಅವರ ದಕ್ಷ, ಶಿಸ್ತಿನ ಆಡಳಿತವನ್ನು ನೆನೆಸುತ್ತಾರೆ.
ಪತ್ನಿ, ಮೂವರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ತೊರೆದಿರುವ ಅವರ ಅಂತ್ಯಸಂಸ್ಕಾರ ಗುರುವಾರ ರಾತ್ರಿ ಬೆಳಗಾವಿಯಲ್ಲಿ ನಡೆಯಿತು.