ಬೆಳಗಾವಿ: ಹಿಂದೂ ಅಶ್ಲೀಲ ಪದ ಎಂಬ ಹೇಳಿಕೆ ನೀಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ತಾವು ಕ್ಷಮೆ ಕೇಳುವುದಿಲ್ಲ. ತಮ್ಮ ಹೇಳಿಕೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಿತಿ ರಚಿಸಿ ತನಿಖೆ ಮಾಡಲಿ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಹಿಂದೂ ಎಂಬ ಪದ ಪರ್ಷಿಯನ್ ನಲ್ಲಿ ಅಶ್ಲೀಲ ಪದ ಎಂದು ಹೇಳಿದ್ದೇನೆ. ಹೇಳಿಕೆ ತಪ್ಪಿದ್ದರೆ ಕ್ಷಮೆಯಲ್ಲ, ರಾಜೀನಾಮೆಯನ್ನೇ ನೀಡುತ್ತೇನೆ. ಅಶ್ಲೀಲ ಅಂತ ಡಿಕ್ಷನರಿಯಲ್ಲಿದೆ. ಹೊರತು ನಾನು ಬರೆದಿದ್ದೀನಾ…ಎಂದು ಪ್ರಶ್ನಿಸಿದ್ದಾರೆ.
ನನ್ನನ್ನು ಅರೆಬರೆ ಓದಿಕೊಂಡವ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳುತ್ತಿದ್ದಾರೆ. ನಾನು ಅರೆಬರೆ ಓದಿಕೊಂಡಿಲ್ಲ. 30 ವರ್ಷಗಳಿಂದ ನಿರಂತರವಾಗಿ ಓದುತ್ತಲೇ ಇದ್ದೇನೆ. ಈಗ ಬೊಮ್ಮಾಯಿ ಅವರದ್ದೇ ಸರ್ಕಾರ ಇದೆ. ನಾನು ಹೇಳಿದ ಪದಗಳ ಬಗ್ಗೆ ತನಿಖೆ ಮಾಡಲಿ. ತಪ್ಪು ಎಂದು ಸಾಬೀತಾದರೆ ನಾನು ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ.