ಶಾಂಘೈ: ಚೀನಾದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ಶಾಂಘೈ ಸೇರಿದಂತೆ ಹಲವೆಡೆ ಶಾಲಾ-ಕಾಲೇಜುಗಳಿಗೆ ರಜೆ ನೀಡಿ ಮತ್ತೆ ಆನ್ಲೈನ್ ತರಗತಿಗಳನ್ನು ಆರಂಭಿಸಲಾಗಿದೆ.
ಕೊರಓನಾ ನಿಯಂತ್ರಣಕ್ಕೆ ಸರಕಾರದ ಎಲ್ಲ ಕ್ರಮಗಳ ಹೊರತಾಗಿಯೂ ಕೊರೊನಾ ಸೋಂಕು ಹರಡುವುದು ಅಧಿಕವಾಗಿದೆ. ನರ್ಸರಿ ಮತ್ತು ಶಿಶುಪಾಲನಾ ಕೇಂದ್ರಗಳನ್ನು ಸಂಪೂರ್ಣ ಬಂದ್ ಮಾಡಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್ಗಳ ಸಂಖ್ಯೆ ಅಧಿಕಗೊಳಿಸಲಾಗಿದೆ.
ಶಾಂಘೈ ನಗರ ಒಂದರಲ್ಲೇ ಹೆಚ್ಚುವರಿಯಾಗಿ 2.3 ಲಕ್ಷ ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.
ಇನ್ನೊಂದೆಡೆ, ನಾಗರಿ ಕರ ಪ್ರತಿರೋಧದ ಹಿನ್ನೆಲೆಯಲ್ಲಿ ಚೀನಾದಲ್ಲಿ ಕೊರೊನಾ ನಿರ್ಬಂಧ ತೆರವುಗೊಳಿಸಿದ ನಂತರ ಅಲ್ಲಿನ ಆರೋಗ್ಯ ಸಚಿವಾಲಯ ಕೊರೊನಾ ಸಾವಿನ ಪ್ರಕರಣಗಳ ಸಂಖ್ಯೆಯ ವರದಿಯನ್ನೇ ಬಿಡುಗಡೆಗೊಳಿಸುತ್ತಿಲ್ಲವಾದರೂ ದಿನೇ ದಿನೇ ಕೊರೊನಾ ಸಾವುಗಳು ಅಧಿಕವಾಗುತ್ತಿದೆ. ಸ್ಮಶಾನಗಳಲ್ಲಿ ಶವಗಳನ್ನು ಹೂಳಲು ಮೂರು ದಿನ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಗಳು ಬಂದಿವೆ.
ಶಾಂಘೈ ಮಹಾನಗರ ಒಂದರಲ್ಲೇ ಹೆಚ್ಚುವರಿಯಾಗಿ 2.3 ಲಕ್ಷ ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ..