ಬೆಂಗಳೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಪ್ರಕಟಿಸಿರುವ ಪಠ್ಯಪುಸ್ತಕದಲ್ಲಿ ಏಡ್ಸ, ಕ್ಯಾನ್ಸರ್ ಗೆ ಸ್ವಮೂತ್ರಪಾನವೇ ಮದ್ದು ಎಂಬುದಾಗಿ ಹೇಳಿರುವುದು ಈಗ ಮೈಸೂರು ವಿವಿಯ ಪಠ್ಯಪುಸ್ತಕದಲ್ಲಿ ಮುದ್ರಣವಾಗಿದೆ.
ಮೈಸೂರು ವಿಶ್ವವಿದ್ಯಾನಿಲಯದ ಪದವಿ ವೈದ್ಯಕೀಯ ಸಮಾಜಶಾಸ್ತ್ರ ಪುಸ್ತಕವನ್ನು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಇಡಲಾಗಿದೆ. ಹೊಸ ಪಠ್ಯದಲ್ಲಿ ಮೂತ್ರ ಚಿಕಿತ್ಸೆಯ ಬಗ್ಗೆ ವಿವರಣೆಯನ್ನು ನೀಡಲಾಗಿದೆ.
ಮೂತ್ರ ಚಿಕಿತ್ಸೆಯು ಪ್ರಕೃತಿ ಚಿಕಿತ್ಸೆಯ ಒಂದು ಭಾಗ. ಪ್ರಕೃತಿಯು ರೋಗನಿರೋಧಕ ಶಕ್ತಿಯನ್ನು ಮನುಷ್ಯನಿಗೆ ಆತನ ದೇಹದಲ್ಲಿಯೇ ಒದಗಿಸುತ್ತದೆ. ಅಂದರೇ ಮೂತ್ರ. ಸಹಸ್ತಾರು ವರ್ಷಗಳಿಂದ ಯೋಗಿಗಳು ಮೂತ್ರ ಸೇವಿಸುತ್ತಿದ್ದರು ಎಂಬ ವಿಚಾರವಿದೆ. ಸಂಸ್ಕೃತ ಸಾಹಿತ್ಯ ನಿಧಿಯಲ್ಲಿ ಶಿವಾಂಬು ಸಂಹಿತೆಯಲ್ಲಿ ಈ ಬಗ್ಗೆ ಮಾಹಿತಿ ಇದೆ ಎಂದು ಹೇಳಲಾಗಿದೆ.
ಇದಲ್ಲದೇ ಬೈಬಲ್ ಗ್ರಂಥದಲ್ಲಿ ನಿಮ್ಮ ಆರೋಗ್ಯ ರಕ್ಷಣೆಗಾಗಿ ನಿಮ್ಮ ದೇಹವನ್ನೇ ಅವಲಂಬಿಸಿ ಎಂಬ ಉಲ್ಲೇಖವಿದೆ. ಆರ್ಮ್ ಸ್ಟ್ರಾಂಗ್ ಅವರು ಬರೆದಿರುವಂತ ವಾಟರ್ ಆಫ್ ಲೈಫ್ ಎಂಬ ಪುಸ್ತಕದಲ್ಲಿ ಬಗ್ಗೆ ವಿವರಣೆ ಇದೆ ಎಂದಿದೆ.
ಈ ಬಳಿಕ ಹೇಳುವಂಥ ವಿವರಣೆಯಲ್ಲಿ ಮೂತ್ರ ಚಿಕಿತ್ಸೆಯಿಂದ ಅಂದರೇ ಸ್ವಮೂತ್ರ ಪಾನ ಮತ್ತು ಲೇಪನದಿಂದ ಸಿಹಿಮೂತ್ರ ರೋಗ, ಏಡ್ಸ, ಕ್ಯಾನ್ಸರ್, ಕಣ್ಣು, ಕಿವಿ, ಹಲ್ಲು, ಚರ್ಮರೋಗಗಳನ್ನು ನಿಯಂತ್ರಿಸ ಬಹುದಾಗಿದೆ ಎಂಬ ವಿಚಾರವಿದೆ.