ಬೆಂಗಳೂರು : ಸಿದ್ದರಾಮಯ್ಯರ ಉಗ್ರ ಭಾಗ್ಯ ಯೋಜನೆಯಿಂದ 32ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ ಎಂದು ಬೆಂಗಳೂರಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ವಾಗ್ದಾಳಿ ಮಾಡಿದ್ದಾರೆ.
ಸಮಾಜದ ಶಾಂತಿ ಹಾಳು ಮಾಡುತ್ತಿರುವ ಆರ್ ಎಸ್ ಎಸ್ ಸಹ ನಿಷೇಧ ಮಾಡಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಅವರು ತಿರುಗೇಟು ನೀಡಿದರು.
ಭಾರತ ವಾಸಕ್ಕೆ ಯೋಗ್ಯ ಅಲ್ಲ ಎಂದು ಅನ್ನಿಸಿದವರಿಗೆ ಅಫ್ಘಾನಿಸ್ತಾನ, ಪಾಕಿಸ್ತಾನ ಇದೆ, ಅಲ್ಲಿಗೆ ಫ್ರೀ ವೀಸಾ ಕೊಟ್ಟು ಕಳುಹಿಸುತ್ತೇವೆ ಎಂದು ಕಿಡಿಕಾರಿದರು.
ಯಾವ ಭಯೋತ್ಪಾದನೆ ವಿಚಾರದಲ್ಲಿ ಆರ್ಎಸ್ಎಸ್ ಮುಂದಾಗಿದೆ ಎಂದು ತೋರಿಸಲಿ. ಇಂತಹ ಮತಾಂಧರಿಂದಲೇ ದೇಶ ವಿಭಜನೆಯಾಗಿದ್ದು, ರಾಷ್ಟ್ರವನ್ನು ಪ್ರೀತಿಸಿ ಅನ್ನೋದು ಭಯೋತ್ಪಾದನೆಯಾ ಸಿದ್ದರಾಮಯ್ಯನವರೇ.. ಎಂದು ಎಂದು ಬೆಂಗಳೂರಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ವಾಗ್ದಾಳಿ ಮಾಡಿದ್ದಾರೆ.