ಬೆಳಗಾವಿ, ೫- ಬೆಳಗಾವಿ ಮಹಾನಗರಪಾಲಿಕೆಯ ಮಾಜಿ ಆಯುಕ್ತ ದಿ. ವಿ. ಆರ್. ಭವಾನೆ ಅವರ ಪತ್ನಿ ಶ್ರೀಮತಿ ಸ್ನೇಹಪ್ರಭಾ ವಸಂತ ಭವಾನೆ ಅವರು ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ. ಅವರಿಗೆ 81 ವರ್ಷ ವಯಸ್ಸಾಗಿತ್ತು.
ಅವರು ಶನಿವಾರ ರಾತ್ರಿ 10.20 ಸುಮಾರಿಗೆ ಶ್ರೀನಗರದ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದರು.
ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.
ದಿವಂಗತರ ಅಂತ್ಯಕ್ರಿಯೆ ರವಿವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಗಾಲ್ಫ ಕೋರ್ಸ ಮೈದಾನ ಸಮೀಪದ ಕ್ರಿಶ್ಚಿಯನ್ ರ ಸ್ಮಶಾನದಲ್ಲಿ ನಡೆಯಲಿದೆ.