ಹೊಸದಿಲ್ಲಿ: ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿನ ನಂತರ ಗೋವಾದ ಪ್ರಸಿದ್ಧ ಅಂಜುನಾ ಬೀಚ್ ನಲ್ಲಿರುವ ಕರ್ಲೀಸ್ ರೆಸ್ಟೋರೆಂಟನ್ನು ಇಂದು ಕೆಡವಲು ನಿರ್ಧರಿಸಲಾಗಿತ್ತಾದರೂ ಸುಪ್ರೀಮ ಕೋರ್ಟ ಅದನ್ನು ತಡೆ ಹಿಡಿದಿದೆ.
ರೆಸ್ಟಾರೆಂಟ್ ಕೆಡವುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ನಿರ್ಧಾರವನ್ನು ತೆಗೆದುಕೊಳ್ಳುವವರೆಗೆ ಸ್ಥಗಿತಗೊಳಿಸುವಂತೆ ನ್ಯಾಯಾಲಯವು ಸೂಚಿಸಿದ್ದು, ಸೆಪ್ಟೆಂಬರ್ 16 ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಿಂದ ಯಾವುದೇ ಬಿಡುವು ಪಡೆಯಲು ಅದರ ಮಾಲೀಕರು ವಿಫಲವಾದ ನಂತರ ರೆಸ್ಟೋರೆಂಟ್ ವಿರುದ್ಧ ಕೆಡವುವ ಕ್ರಮ ಪ್ರಾರಂಭವಾಗಿತ್ತು. ಇಂದು ರೆಸ್ಟೋರೆಂಟ ಕೆಡವಲು ಹೊರಗೆ ಭಾರೀ ಪೊಲೀಸ್ ಬಂದೋಬಸ್ತ ಸಹ ಮಾಡಲಾಗಿತ್ತು.
ಅಂಜುನಾ ಬೀಚ್ನಲ್ಲಿರುವ ಕರ್ಲೀಸ್ ರೆಸ್ಟೊರೆಂಟ್ನ ಮಾಲೀಕ ಎಡ್ವಿನ್ ನೂನ್ಸ ಅವರು ಫೋಗಟ್ ಸಾವಿನ ಪ್ರಕರಣದಲ್ಲಿ ಬಂಧಿತ ಐವರ ಪೈಕಿ ಗುರುವಾರ 30,000 ರೂಪಾಯಿಗಳ ವೈಯಕ್ತಿಕ ಜಾಮೀನು ಬಾಂಡ್ ಮತ್ತು ತಲಾ 15,000 ರೂಪಾಯಿಗಳ ಇಬ್ಬರ ಶ್ಯೂರಿಟಿ ವಿರುದ್ಧ ಷರತ್ತುಬದ್ಧ ಜಾಮೀನು ನೀಡಲಾಯಿತು.