ಹುಬ್ಬಳ್ಳಿ, 3- ಬೆಂಗಳೂರು – ಧಾರವಾಡ ನಡುವೆ ಹೊಸದಾಗಿ ಆರಂಭವಾಗಿರುವ “ವಂದೇ ಭಾರತ” ರೈಲಿನ ಸಮಯಕ್ಕೆ ಹೊಂದಾಣಿಕೆ ಆಗುವಂತೆ ಹುಬ್ಬಳ್ಳಿ ರೈಲ್ವೆ ನಿಲ್ದಾಣ ಹಾಗು ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ನಡುವೆ ವೋಲ್ವೋ ಬಸ್ ಹಾಗೂ ಧಾರವಾಡ ರೈಲು ನಿಲ್ದಾಣ ಮತ್ತು ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ನಡುವೆ ರಾಜಹಂಸ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಳಗಾವಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಾರ್ವಜನಿಕ ಪ್ರಯಾಣಿಕರಿಗೆ ಬೆಂಗಳೂರು-ಧಾರವಾಡ ನಡುವೆ ಆರಂಭಿಸಲಾಗಿರುವ “ವಂದೇ ಭಾರತ ” ರೈಲಿನಲ್ಲಿ ಪ್ರಯಾಣ ಮಾಡಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಮಲ್ಟಿ ಆ್ಯಕ್ಸೆಲ್ ವೋಲ್ವೊ ಎಸಿ ಬಸ್ ಹಾಗೂ ಧಾರವಾಡ ರೈಲು ನಿಲ್ದಾಣಕ್ಕೆ ರಾಜಹಂಸ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ರೈಲಿನ ಆಗಮನ – ನಿರ್ಗಮನ ಸಮಯಕ್ಕೆ ಅನುಗುಣವಾಗಿ ಈ ಬಸ್ ಗಳ ವೇಳಾಪಟ್ಟಿ ನಿಗದಿಪಡಿಸಲಾಗಿದೆ.
ವೋಲ್ವೊ ಎಸಿ ಬಸ್:
ಹುಬ್ಬಳ್ಳಿ ರೈಲು ನಿಲ್ದಾಣದಿಂದ ಬೆಳಿಗ್ಗೆ 11-30ಕ್ಕೆ ಹೊರಡುತ್ತದೆ ಮತ್ತು ಬೆಳಗಾವಿ ಕೇಂದ್ರ ಬಸ್ ನಿಲ್ದಾಣಕ್ಕೆ ಮಧ್ಯಾಹ್ನ 1-30ಕ್ಕೆ ತಲುಪುತ್ತದೆ. ಇನ್ನೊಂದು ಬಸ್ಸು ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಬೆಳಿಗ್ಗೆ 11-00 ಕ್ಕೆ ಹೊರಡುತ್ತದೆ. ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಮಧ್ಯಾಹ್ನ 1-10ಕ್ಕೆ ಆಗಮಿಸಲಿದೆ.
ಪ್ರಯಾಣ ದರ ರೂ.180 ನಿಗದಿಪಡಿಸಲಾಗಿದೆ.
ರಾಜಹಂಸ ಬಸ್:
ಧಾರವಾಡ ರೈಲು ನಿಲ್ದಾಣದಿಂದ ಮಧ್ಯಾಹ್ನ 12-25ಕ್ಕೆ ಹೊರಡುತ್ತದೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣಕ್ಕೆ 1-55ಕ್ಕೆ ತಲುಪುತ್ತದೆ. ಇನ್ನೊಂದು ಬಸ್ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಬೆಳಿಗ್ಗೆ 11-20ಕ್ಕೆ ಹೊರಡುತ್ತದೆ. ಧಾರವಾಡ ರೈಲು ನಿಲ್ದಾಣಕ್ಕೆ ಮಧ್ಯಾಹ್ನ 12-50ಕ್ಕೆ ಆಗಮಿಸಲಿದೆ.
ಪ್ರಯಾಣ ದರ ರೂ.135 ನಿಗದಿಪಡಿಸಲಾಗಿದೆ.