ಬೆಳಗಾವಿ : ಬೆಳಗಾವಿ ಶ್ರೀರಾಮ ಸೇನೆ ಮುಖಂಡ ರವಿ ಕೋಕಿತ್ಕರ ಮೇಲೆ ಗುಂಡು ಹಾರಿಸಲಾಗಿದೆ.
ಕೋಕಿತ್ಕರ ತಮ್ಮ ಕಾರಿನಲ್ಲಿ ಹಿಂಡಲಗಾ ಬಳಿ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದವರು ರಿವೊಲ್ವರ್ ದಿಂದ ಗುಂಡು ಹಾರಿಸಿದ್ದಾರೆ. ಗುಂಡು ಅವರ ಕುತ್ತಿಗೆ ಸವರಿಕೊಂಡು ಹೋಗಿದೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು ಅವರು ಅಪಾಯದಿಂದ ಪಾರಾಗಿದ್ದಾರೆ.
ರವಿ ಕೋಕಿತ್ಕರ್ ಕಾರಿನ ಮುಂದಿನ ಸೀಟ್ ನಲ್ಲಿ ಕುಳಿತು ಪ್ರಯಾಣಿಸುತ್ತಿದ್ದರು. ಕಾರಿನ ಸಮೀಪಕ್ಕೆ ಎರಡು ಬೈಕ್ ಗಳಲ್ಲಿ ಬಂದ ಮೂವರು ಹತ್ತಿರದಿಂದ ಗುಂಡು ಹಾರಿಸಿದ್ದಾರೆ. ಗುಂಡು ಕೋಕಿತ್ಕರ ಅವರ ಗದ್ದಕ್ಕೆ ತಗುಲಿ ಡ್ರೈವರ್ ಅವರ ಕೈಗೂ ತಗಲಿದೆ. ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ.
ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿದ್ದು ಹಿಂಡಲಗಾದಿಂದ ಮಹಾರಾಷ್ಟ್ರದ ಗಡಿ ಹತ್ತಿರವಿರುವದರಿಂದ ಗಡಿಯಲ್ಲಿ ತಪಾಸಣೆ ಹೆಚ್ಚಿಸಲಾಗಿದೆ.