ಕೊಡಗು : ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಖುಷಿಯಾಗಿದ್ದ ವಿದ್ಯಾರ್ಥಿನಿಯೊಬ್ಬಳ ತಲೆ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಸೋರ್ಲಬ್ಬಿ ಗ್ರಾಮದಲ್ಲಿ ನಡೆದಿದೆ.
ನಿನ್ನೆಯಷ್ಟೇ ಎಸ್.ಎಸ್.ಎಲ್.ಸಿ ಫಲಿತಾಂಶ ಬಂದಿತ್ತು. ಉತ್ತಮ ಅಂಕಗಳಿಸಿದ ಸಂಭ್ರಮದಲ್ಲಿದ್ದ ಮೀನಾ ಎಂಬ ವಿದ್ಯಾರ್ಥಿನಿಯ ತಲೆಯನ್ನು ಓಂಕಾರಪ್ಪ ಎಂಬಾತ ಕತ್ತರಿಸಿ ವ್ಯಕ್ತಿ ಕ್ರೌರ್ಯ ಮೆರೆದಿದ್ದಾನೆ. ನಿರ್ಜನ ಪ್ರದೇಶಕ್ಕೆ ವಿದ್ಯಾರ್ಥಿನಿಯನ್ನು ಕರೆದೊಯ್ದು ರುಂಡ-ಮುಂಡ ಬೇರ್ಪಡಿಸಿ ಅಟ್ಟಹಾಸ ಮೆರೆದಿದ್ದಾನೆ.
ಕೃತ್ಯಕ್ಕೆ ಕಾರಣ:
ನಿನ್ನೆಯೇ ಓಂಕಾರಪ್ಪ ಜೊತೆ ವಿದ್ಯಾರ್ಥಿನಿ ಮೀನಾಳ ವಿವಾಹ ನಿಶ್ಚಿತಾರ್ಥವಾಗುವುದಿತ್ತು. ಹುಡುಗಿ ಅಪ್ರಾಪ್ತ ಇರುವ ಕಾರಣ ಇದನ್ನು ತಿಳಿದ ಗ್ರಾಮಸ್ಥರು ಬಾಲ್ಯ ವಿವಾಹದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ನಿಶ್ಚಿತಾರ್ಥ ನಿಲ್ಲಿಸಿದ್ದರು. ಬಳಿಕ ಎರಡೂ ಕುಟಿಂಬದವರು ತಮ್ಮ ತಮ್ಮ ಮನೆಗೆ ವಾಪಾಸ್ ಆಗಿದ್ದರು. ನಿಶ್ಚಿತಾರ್ಥ ನಿಂತಿದ್ದಕ್ಕೇ ಸಿಟ್ಟಿಗೆದ್ದು ಆರೋಪಿ ಮೀನಾಳನ್ನು ಇಷ್ಟು ಬರ್ಬರವಾಗಿ ಕೊಲೆ ಮಾಡಿರಬಹುದು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಎಸ್ ಎಸ್ ಎಲ್ ತಂಡ, ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಘಟನೆ ನಡೆದ ಸ್ವಲ್ಪ ದೂರದಲ್ಲಿ ಮಚ್ಚು ಪತ್ತೆಯಾಗಿದೆ.