ಚಾಮರಾಜನಗರ, 9- ಶಾಲೆಯಲ್ಲಿ ಮುಂಜಾನೆ ಪ್ರಾರ್ಥನೆ ನಂತರ ರಾಷ್ಟ್ರ ಗೀತೆ ಹಾಡುತ್ತಿರುವಾಗ ಹೃದಯಾಘಾತವಾಗಿ ಹತ್ತನೇ ತರಗತಿ ವಿದ್ಯಾರ್ಥಿನಿ ಸಾವಿಗೀಡಾದ ದುಃಖದ ಘಟನೆ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ.
ಇತ್ತೀಚಿಗಷ್ಟೇ ತಂದೆ-ತಾಯಿಯರನ್ನು ಕಳೆದುಕೊಂಡಿದ್ದ ಫೇಲಿಸಾ ಬಾಲಕಿಯರ ವಸತಿ ಗೃಹದಲ್ಲಿದ್ದು ನಿರ್ಮಲ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಎಂದಿನಂತೆ ಇಂದೂ ಶಾಲೆಯ ಪ್ರಾರಂಭದ ಅಸೆಂಬ್ಲಿಯಲ್ಲಿ ಭಾಗವಹಿಸಿದ್ದ ಫೇಲಿಸಾ ಅಂತ್ಯದಲ್ಲಿ ನುಡಿಯುವ ರಾಷ್ಟ್ರಗೀತೆ ಹಾಡುತ್ತಿರುವಾಗ ಕುಸಿದು ಕೆಳಗೆ ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು. ಆದರೆ ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು. ಪರೀಕ್ಷಿಸಿದ ವೈದ್ಯರು ಫೇಲಿಸಾ ಹೃದಯಾಘಾತದಿಂದ ನಿಧನರಾಗಿದ್ದಾರೆಂದು ತಿಳಿಸಿದರು.