ಬೆಂಗಳೂರು : ದೇಶಕ್ಕಾಗಿ ಹುತಾತ್ಮರಾದ ಭಗತ ಸಿಂಗ್ ಕುರಿತಾದ ಪಠ್ಯವನ್ನೂ ಈಗ ಕೈಬಿಡಲಾಗಿದೆ. ಭಗತ ಸಿಂಗ್ ಪಾಠವನ್ನು ಪಠ್ಯ ಭೋದನೆಯಿಂದ ಕೈಬಿಟ್ಟಿರುವುದು ವಿರೋಧಕ್ಕೆ ಕಾರಣವಾಗುತ್ತಿದೆ.
ಶಿಕ್ಷಣ ಇಲಾಖೆ ಭಗತ್ ಸಿಂಗ್ ಪಾಠವನ್ನು ಭೋದನೆಯಿಂದ ಕೈಬಿಟ್ಟಿರುವುದಕ್ಕೆ ಲೇಖಕರು ಹಾಗೂ ವಿದ್ಯಾರ್ಥಿಗಳ ಸಂಘಟನೆಗಳು ವಿರೋಧ ಹೊರ ಹಾಕುತ್ತಿವೆ.
ಪಠ್ಯ ಪರಿಷ್ಕರಣೆ ವೇಳೆಯೇ ಭಗತ ಸಿಂಗ್ ಪಾಠ ಕೈಬಿಟ್ಟು ವಿರೋಧಕ್ಕೆ ಶಿಕ್ಷಣ ಇಲಾಖೆ ಗುರಿಯಾಗಿತ್ತು. ವ್ಯಾಪಕ ವಿರೋಧದ ಬಳಿಕ ಪಾಠ ಕೈಬಿಟ್ಟಿಲ್ಲ ಅಂತಾ ನಾಟಕವಾಡಿತ್ತು. ಆದರೆ ಈಗ ಲೇಖಕರು ವಿರೋಧ ಮಾಡಿದ್ದಾರೆ ಅನ್ನುವ ಕಾರಣ ಮುಂದಿಟ್ಟು ಎಸ್ಎಸ್ಎಲ್ ಸಿ ಕನ್ನಡ ಪಠ್ಯ ಪುಸ್ತಕದಲ್ಲಿ ಮುದ್ರಣವಾಗಿರುವ ಭಗತ ಸಿಂಗ್ ಪಾಠವನ್ನು ಭೋದನೆಯಿಂದ ಕೈಬಿಟ್ಟಿದೆ. ಮಕ್ಕಳಿಗೆ ಭಗತ ಸಿಂಗ್ ಅವರ ಪಾಠ ಮಾಡದಂತೆ ಸುತ್ತೋಲೆ ಹೊರಡಿಸಿದೆ. ಶಿಕ್ಷಣ ಇಲಾಖೆಯ ಈ ನಡೆಗೆ ವ್ಯಾಪಕ ವಿರೋಧ ಕೇಳಿ ಬರುತ್ತಿದೆ.