ಜಮ್ಮು,20- : ಕಾಶ್ಮೀರದಲ್ಲಿ ಖ್ಯಾತ ಹಿಂದಿ ಚಿತ್ರನಟ ಇಮ್ರಾನ್ ಹಾಶ್ಮಿ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಹಲ್ಗಾಮ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇಮ್ರಾನ್ ಹಶ್ಮಿ ಅವರು ತಮ್ಮ ಹೊಸ ಚಿತ್ರ ಗ್ರೌಂಡ್ ಜೀರೋ ಶೂಟಿಂಗ್ಗಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ್ದಾರೆ.
ಇಮ್ರಾನ್ ಹಶ್ಮಿ ಅವರು ಶೂಟಿಂಗ್ ಮುಗಿಸಿ ಪಹಲ್ಗಾಮ್ ಹತ್ತಿರದ ಮಾರುಕಟ್ಟೆಗೆ ಹೋದಾಗ ಅಪರಿಚಿತರು ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಸಂಬಂಧ ಎಫ್ಐಆರ್ ದಾಖಲಾಗಿದೆ.