ಗೋಕಾಕ, ೧೩: ಗೋಕಾಕ ನಗರದ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ಸುರೇಶ ಪೂಜಾರಿ ಎಂಬ ಯುವಕನನ್ನು ರವಿವಾರ ರಾತ್ರಿ ಮಾರಕಾಸ್ತ್ರ ಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ.
ಆದಿ ಜಾoಭವ ನಗರದ ನಿವಾಸಿ ಸುರೇಶನು ಪೆಟ್ರೋಲ್ ಬಂಕ್ ಕೆಲಸ ಮುಗಿಸಿ ರಾತ್ರಿ ಮನೆಗೆ ಬರುತ್ತಿದ್ದಾಗ ಸುಮಾರು ಐದು ಜನರಿದ್ದ ಗುಂಪು ಆತನ ಮೇಲೆ ದಾಳಿ ಮಾಡಿ ಕೊಲೆ ಮಾಡಿ ಪರಾರಿಯಾಗಿದೆ.
ಸುರೇಶನ ಸ್ನೇಹಿತರೇ ಅವರ ಹತ್ಯೆ ಮಾಡಿದ್ದಾರೆಂದು ಸಂಶಯದಿಂದ ಅವರ ಮನೆಯವರು, ಸಂಬಂಧಿಕರು ಸೇರಿದಂತೆ ಸುಮಾರು ನೂರು ಜನ ಅದೇ ನಗರದಲ್ಲಿರುವ ಆರೋಪಿಗಳ ಮನೆಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.
ಸುರೇಶ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದಿ ಜಾoಭವ ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಕಾನೂನು ಸುವ್ಯವಸ್ತೆ ಕಾಪಾಡಲು ಸ್ಥಳದಲ್ಲೇ ಗಸ್ತು ಮಾಡುತ್ತಿದ್ದಾರೆ.