ಜಬಲ್ಪುರ: ಸಾವು ಹೇಗೆ ಬರುತ್ತದೆ ಎಂದು ಹೇಳುವುದೇ ಕಷ್ಟ. ಅದೃಷ್ಟ ಕೆಟ್ಟಿದ್ದರೆ ಸುಮ್ಮನೆ ಹೋಗುವಾಗಲೂ ಸಾವು ಬರಬಹುದು. ಅದೇ ರೀತಿ ಹೃದಯಾಘಾತವಂತೂ ಇದೀಗ ಸಾಮಾನ್ಯ ಎನಿಸಿಬಿಟ್ಟಿದೆ. ಇಂಥದ್ದೇ ಒಂದು ಭಯಾನಕ ವಿಡಿಯೋ ಇದೀಗ ವೈರಲ್ ಆಗಿದೆ.
ಬಸ್ ಚಲಾಯಿಸುತ್ತಿರುವಾಗಲೇ ಚಾಲಕನೊಬ್ಬನಿಗೆ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಜಬಲಪುರದಲ್ಲಿ ನಡೆದಿದ್ದು ಇದರ ಭಯಾನಕ ವಿಡಿಯೋ ವೈರಲ್ ಆಗಿದೆ. ಈತ ಚಾಲನೆ ಮಾಡುತ್ತಿರುವಾಗಲೇ ಹೃದಯಾಘಾತವಾಗಿದ್ದರಿಂದ ಬಸ್ಸು ನಿಯಂತ್ರಣ ತಪ್ಪಿ ಸಿಗ್ನಲ್ ನಲ್ಲಿ ನಿಂತ ಬೈಕ್ಗಳ ಮೇಲೆಯೇ ಏರಿ ಹೋದ ಭಯಾನಕ ಘಟನೆ ನಡೆಯಿತು.
ಬಸ್ ಚಕ್ರದಡಿ ಇಬ್ಬರು ಅಮಾಯಕ ವ್ಯಕ್ತಿಗಳು ಸಿಲುಕಿ ಸಾವನ್ನಪ್ಪಿದ್ದಾರೆ. ಬಸ್ ಅಡ್ಡಾದಿಡ್ಡಿ ಚಲಿಸಿ ಕಂಡ ಕಂಡ ವಾಹನಗಳಿಗೆ ಡಿಕ್ಕಿ ಹೊಡೆದಿರುವುದನ್ನು ಸಿಸಿಟಿವಿಯಲ್ಲಿ ನೋಡಬಹುದಾಗಿದೆ. ಸಿಟಿ ಬಸ್ ಗೋಹಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಸರ್ಕಲ್ನಲ್ಲಿ ರೆಡ್ ಸಿಗ್ನಲ್ ಬಿದ್ದಾಗ ವಾಹನ ಸವಾರರು ನಿಂತಿದ್ದರು. ಅವರ ಮೇಲೆ ಬಸ್ ಹಾದು ಹೋಗಿದೆ. ಈ ಘಟನೆಯ ನಂತರ ಟ್ವಿಟರ್ನಲ್ಲಿ ಹ್ಯಾಷ್ಟ್ಯಾಗ್ ಜತೆಗೆ ಹಾರ್ಟ್ಆಟ್ಯಾಕ್ ಕುರಿತು ಹಲವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
https://twitter.com/the_mpr/status/1599389355394891784?ref_src=twsrc%5Etfw%7Ctwcamp%5Etweetembed%7Ctwterm%5E1599389355394891784%7Ctwgr%5E022160cd48cf343ad907d16051459f13e6915afe%7Ctwcon%5Es1_c10&ref_url=https%3A%2F%2Fkannadadunia.com%2Flive-news%2Fheartattack-trends-on-twitter-as-netizens-express-worry-over-increasing-cases-of-heart-attack-share-scaryvideos-of-people-dying-of-heart-attack-on-camera%2F



