ಹೈದರಾಬಾದ : ತೆಲುಗು ಸೂಪರ್ಸ್ಟಾರ್, ನಟ ಮಹೇಶಬಾಬು ಅವರ ತಂದೆ ಶ್ರೀ ಕೃಷ್ಣ ಅವರು ಹೃದಯಾಘಾತದಿಂದ ಮಂಗಳವಾರ ಹೈದರಾಬಾದಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಅವರಿಗೆ 80 ವರ್ಷ ವಯಸ್ಸಾಗಿತ್ತು, ಶ್ರೀ ಕೃಷ್ಣ ಅವರಿಗೆ ಸೋಮವಾರ ಬೆಳಗ್ಗೆ 1.15ಕ್ಕೆ ಸುಮಾರಿಗೆ ಹೃದಯಾಘಾತವಾಗಿತ್ತು ಕೂಡಲೇ ಅವರನ್ನು ಹೈದರಾಬಾದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮಂಗಳವಾರ ಮುಂಜಾನೆ ಚಿಕಿತ್ಸೆ ಫಲಿಸದೇ ನಿಧನ ಹೊಂದಿದ್ದರು.
ತೆಲುಗು ಚಿತ್ರರಂಗದ ಹಿರಿಯ ನಟರಾಗಿದ್ದ ಶ್ರೀ ಕೃಷ್ಣ ಅವರು ಸುಮಾರು 350 ಚಿತ್ರಗಳಲ್ಲಿ ನಟಿಸಿದ್ದು ಅಗ್ರ ನಟರಲ್ಲಿ ಒಬ್ಬರಾಗಿದ್ದರು. ಅಲ್ಲದೇ ಅವರು ನಿರ್ದೇಶಕ ಮತ್ತು ನಿರ್ಮಾಪಕರೂ ಆಗಿದ್ದರು. ಅವರಿಗೆ 2009 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಶ್ರೀ ಕೃಷ್ಣ ಅವರು ನಟ ಮಹೇಶ ಬಾಬು ಅವರ ತಂದೆ ಮತ್ತು ಟಿಡಿಪಿ ನಾಯಕ ಜಯ್ ಗಲ್ಲಾ ಅವರ ಮಾವ. ಅವರು 1980 ರ ದಶಕದಲ್ಲಿ ಕಾಂಗ್ರೆಸ್ ಪಕ್ಷದ ಮೂಲಕ ಸಂಸದರಾದರು. ಆದರೆ ಮಾಜಿ ಪ್ರಧಾನಿ ರಾಜೀವ ಗಾಂಧಿಯವರ ಮರಣದ ನಂತರ ರಾಜಕೀಯವನ್ನು ತೊರೆದಿದ್ದರು.
ಅವರ ಪತ್ನಿ ಮತ್ತು ಮಹೇಶ ಬಾಬು ಅವರ ತಾಯಿ ಇಂದಿರಾ ದೇವಿ ಕಳೆದ ತಿಂಗಳು ನಿಧನರಾಗಿದ್ದರು. ಅವರ ಹಿರಿಯ ಮಗ ರಮೇಶ ಬಾಬು ಕಳೆದ ಜನವರಿಯಲ್ಲಿ ನಿಧನರಾಗಿದ್ದರು.