ವಿಜಯಪುರ: ನಗರದ ಸ್ಮಶಾನದಲ್ಲಿನ ಶವಗಳನ್ನು ಬೀದಿ ನಾಯಿಗಳು ರಸ್ತೆಗೆ ತಂದು ಎಸೆದಿರುವ ಘಟನೆ ಪಟ್ಟಣದ ಜಿಲ್ಲಾ ಪಂಚಾಯತ ರಸ್ತೆಯ ಸ್ಮಶಾನದ ಬಳಿ ನಡೆದಿದೆ.
ಪಂಚಾಯತ್ ರಸ್ತೆ ಬಳಿಯ ಸ್ಮಶಾನದಲ್ಲಿಯ ಶವಗಳನ್ನು ಬೀದಿ ನಾಯಿಗಳು ತಿನ್ನುತ್ತಿದ್ದು, ಎಳೆದು ತಂದು ರಸ್ತೆಗೆ ಎಸೆದಿವೆ.
ರಸ್ತೆಯಲ್ಲಿ ಶವದ ಭಾಗಗಳನ್ನು ಕಂಡು ಜನ ಹೌಹಾರಿದ್ದು, ಸೂಕ್ತ ರೀತಿಯಲ್ಲಿ ಸ್ಮಶಾನ ನಿರ್ವಹಣೆ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.