ಬೆಳಗಾವಿ : ಹಲವು ದಿನಗಳಿಂದ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಚಾಲಾಕಿ ಚಿರತೆ ಇಂದು ಮಧ್ಯಾಹ್ನ ಮತ್ತೆ ಜನರಿಗೆ ಕಂಡು ಬಂದಿದೆ.
ಕ್ಲಬ್ ರಸ್ತೆಯಲ್ಲಿ ಕಂಡು ಪುನಃ ಗಾಲ್ಫ ಮೈದಾನದಲ್ಲಿ ನುಸಳಿಕೊಂಡಿರುವ ಚಿರತೆ ಹಿಡಿಯಲು ಜೆಸಿಬಿ ಕಾರ್ಯಾಚರಣೆ ಪ್ರಾರಂಭಿಸಿರುವದರಿಂದ ಚಿರತೆ ಮೈದಾನಕ್ಕೆ ಹೊಂದಿಕೊಂಡಿರುವ ಜನರಿಂದ ತುಂಬಿರುವ ಹಿಂಡಲಗಾ ಗಣೇಶ ಮಂದಿರದ ಬಳಿ ಮಧ್ಯಾಹ್ನ ಕಂಡು ಬಂದಿದ್ದು ಜನರ ವಾಹನಗಳ ಓಡಾಟದಿಂದ ಮತ್ತೇ ಗಾಲ್ಫ ಕೋರ್ಸ ಸೇರಿಕೊಂಡಿದ್ದೆ.
ಇತ್ತ ಚಿರತೆ ಪತ್ತೆಗೆ ಸುಲಭವಾಗಲಿ ಎಂದು ಜೆಸಿಬಿ ಬಳಸಿ ಪೊದೆಗಳನ್ನು ಸವರಿ ಕಡಿಮೆ ಎತ್ತರದ ಗಿಡಗಳನ್ನು ಕಡೆದು ಹಾಕಲಾಗಿದೆ.
ಚಿರತೆ ಗಾಲ್ಫ ಕೋರ್ಸ ಹಿಂಬದಿಯ ಗೋಡೆ ಜಿಗಿದು ಹಿಂಡಲಗಾ ಗಣಪತಿ ಮಂದಿರದ ಪಕ್ಕದಲ್ಲಿರುವ ಮಿಲಿಟರಿ ಗೃಹ ಸಮುಚ್ಚಯದ ಬಳಿ ಕಂಡು ಬಂದಿತ್ತು. ಆದರೆ ಅಲ್ಲಿ ಜನರ ಚಲನವಲನ ಹೆಚ್ಚಾಗಿದ್ದರಿಂದ ಪುನಃ ಗೋಡೆ ಜಿಗಿದು ಗಾಲ್ಫ ಮೈದಾನದಲ್ಲಿ ಓಡಿ ಹೋಯಿತು.