ಪಾಲಘರ್: ಗರ್ಭಾ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು ನೃತ್ಯ ಮಾಡುವಾಗಲೇ ಸಾವನ್ನಪ್ಪಿದ್ದು, ನಂತರ ಅವರ ತಂದೆಯೂ ಆಘಾತದಿಂದ ಮೃತಪಟ್ಟ ಘಟನೆ ಮಹಾರಾಷ್ಟ್ರದ ಪಾಲಘರ್ ಜಿಲ್ಲೆಯ ವಿರಾರ್ ಪಟ್ಟಣದಲ್ಲಿ ನಡೆದಿದೆ.
ಗರ್ಭಾ ಕಾರ್ಯಕ್ರಮವೊಂದರಲ್ಲಿ 35 ವರ್ಷದ ವ್ಯಕ್ತಿಯೊಬ್ಬರು ನೃತ್ಯ ಮಾಡುವಾಗಲೇ ಸಾವನ್ನಪ್ಪಿದ್ದು, ಬಳಿಕ ಅವರ ತಂದೆಯೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಮಧ್ಯರಾತ್ರಿ ವಿರಾರ್ನ ಗ್ಲೋಬಲ್ ಸಿಟಿ ಕಾಂಪ್ಲೆಕ್ಸ್ನಲ್ಲಿ ನಡೆದ ಗಾರ್ಭಾ ಕಾರ್ಯಕ್ರಮವೊಂದರಲ್ಲಿ ಮನೀಶ್ ನಾರಾಪ್ಜಿ ಸೋನಿಗ್ರಾ ಅವರು ನೃತ್ಯ ಮಾಡುವಾಗ ಕುಸಿದು ಬಿದ್ದಿದ್ದರು. ಆ ವ್ಯಕ್ತಿಯನ್ನು ಅವರ ತಂದೆ ನಾರಾಪ್ಜಿ ಸೋನಿಗ್ರಾ(66) ಅವರು ಆಸ್ಪತ್ರೆಗೆ ಸಾಗಿಸಿದರು. ಆದರೆ ಅಲ್ಲಿ ತಮ್ಮ ಮಗನ ಸಾವಿನ ಸುದ್ದಿ ತಿಳಿದ ಕೂಡಲೇ ಶಾಕ್ ಗೆ ಒಳಗಾಗಿ ಅವರೂ ಕೂಡ ಕುಸಿದುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.