ಜೈಪುರ, ೨೬- ಕೆಲಸ ಮಾಡಿದ್ದಕ್ಕೆ ಕೂಲಿ ನೀಡುವಂತೆ ಒತ್ತಾಯಿಸಿದ ದಲಿತ ವ್ಯಕ್ತಿಯನ್ನು ಥಳಿಸಿ, ಬಲವಂತವಾಗಿ ಮೂತ್ರ ಕುಡಿಸಿದ ಘಟನೆ ನಡೆದಿದೆ.
ರಾಜಸ್ಥಾನದ ಸಿರೋಹಿ ಜಿಲ್ಲೆಯ ದಲಿತ ಇಲೆಕ್ಟ್ರಿಷಿಯನ್ ತನ್ನ ಕೆಲಸಕ್ಕೆ ಹಣ ನೀಡುವಂತೆ ಒತ್ತಾಯಿಸಿದ್ದಕ್ಕಾಗಿ ಥಳಿಸಿ, ಮೂತ್ರ ಕುಡಿಸಿ, ಶೂಗಳಿಂದ ಹಾರ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಕೋರರಲ್ಲಿ ಒಬ್ಬ ದಾಳಿಯನ್ನು ರೆಕಾರ್ಡ್ ಮಾಡಿದ್ದಾನೆ, ಆ ವ್ಯಕ್ತಿ ನಿಲ್ಲಿಸುವಂತೆ ಮನವಿ ಮಾಡಿದರು. ಕೇಳದೇ ವಿಡಿಯೋ ಮಾಡಿ ನಂತರ ಈ ವಿಡಿಯೋವನ್ನು ದಾಳಿಕೋರರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಭರತ ಕುಮಾರ (38) ಎಂಬುವರು ನವೆಂಬರ್ 23 ರಂದು ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ಕುಮಾರ ಅವರು ಕೆಲವು ವಿದ್ಯುತ್ ಕೆಲಸಗಳನ್ನು ಮಾಡಿದ್ದಾರೆ. 21,100 ರೂ ಬಿಲ್ ಆಗಿದ್ದು, ಅವರಿಗೆ 5,000 ರೂ. ನೀಡಲಾಗಿದೆ. ನ.19ರಂದು ಮಧ್ಯಾಹ್ನ ಧಾಬಾವೊಂದಕ್ಕೆ ತೆರಳಿ ಉಳಿದ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ರಾತ್ರಿ 9 ಗಂಟೆಗೆ ಬರಲು ಹೇಳಲಾಗಿತ್ತು. ರಾತ್ರಿ 9.10ರ ಸುಮಾರಿಗೆ ವಾಪಸ್ ಹೋದಾಗ ಹಣ ನೀಡದೇ ಇದ್ದಾಗ ಪೊಲೀಸರಿಗೆ ದೂರು ನೀಡುವುದಾಗಿ ಆತ ಬೆದರಿಕೆ ಹಾಕಿದ್ದಾನೆ.
ಆ ವೇಳೆ ಆರೋಪಿಗಳು ಇತರರೊಂದಿಗೆ ಸೇರಿ ಆತನನ್ನು ಹಿಡಿದು ಥಳಿಸಿದ್ದಾರೆ. ಕುಮಾರ್‌ಗೆ ಹೊಡೆದು, ಮೂತ್ರ ಕುಡಿಸುವ ವೇಳೆ ಚಪ್ಪಲಿ ಹಾರವನ್ನು ಕೊರಳಿಗೆ ಹಾಕಿದರು. ಒಬ್ಬ ವೀಡಿಯೋ ಮಾಡಿ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಸುಮಾರು ಐದು ಗಂಟೆಗಳ ಕಾಲ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ ಸಿರೋಹಿಯ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ದಿನೇಶ ಕುಮಾರ ತಿಳಿಸಿದ್ದಾರೆ.