ಬೆಂಗಳೂರು, ೨೬: ಕೆಪಿಎಸ್ ಸಿ (ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್ ) ಪರೀಕ್ಷೆಯಲ್ಲಿ ಉತಿರ್ಣಗೊಂಡು ಉದ್ಯೋಗ ನೇಮಕಾತಿಗೆ ಎದುರು ನೋಡುತ್ತಿದ್ದ ವ್ಯಕ್ತಿಯೊಬ್ಬ ತಾಳ್ಮೆ ಕಳೆದುಕೊಂಡು ಪೊಲೀಸ್ ಭದ್ರತೆ ಭೇದಿಸಿ ಮುಖ್ಯಮಂತ್ರಿಗಳತ್ತ ನುಗ್ಗಲು ಯತ್ನಿಸಿದ ಘಟನೆ ಮಾಣೆಕ ಷಾ ಪರೇಡ್ ಮೈದಾನದಲ್ಲಿ ಗಣರಾಜೋತ್ಸವ ದಿನದಂದು ಜರುಗಿದೆ.
ಸರಕಾರಿ ಹುದ್ದೆಗಾಗಿರುವ ಕೆಪಿಎಸ್ ಈ ಪರೀಕ್ಷೆ ಪಾಸಾಗಿರುವ ಮೈಸೂರು ಮೂಲದ ಪರುಶುರಾಮ ಎಂಬವರು ಆರ್ಡರ್ ವಿಳಂಬದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲು ಬಂದಿದ್ದರು.
ಮಾಣಿಕ ಷಾ ಪರೇಡ್ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ ವೇಳೆ ಅವರು ಸಿದ್ದರಾಮಯ್ಯ ಬಳಿ ನುಗ್ಗಲು ಯತ್ನಿಸಿದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿದ್ದರಾಮಯ್ಯ ಅವರ ಬಳಿ ಹೋಗಲು ಪೊಲೀಸರು ಬಿಡದಿದ್ದಾಗ ಪರಶುರಾಮ ಗಣರಾಜ್ಯೋತ್ಸವ ಪರೇಡ್ ಮಧ್ಯೆದಲ್ಲೇ ನುಗ್ಗಲು ಯತ್ನಿಸಿದ್ದಾರೆ. ಗಣರಾಜ್ಯೋತ್ಸವ ಪರೇಡ್ ಮಧ್ಯೆದಲ್ಲಿ ಮನವಿ ಪತ್ರ ಪ್ರದರ್ಶಿಸಿದ್ದಾರೆ. ಪರಶುರಾಮ ಮನವಿ ಪತ್ರ ಪ್ರದರ್ಶಿಸುತ್ತಿದ್ದ ಹಾಗೇ ಪೊಲೀಸರು ಅವರನ್ನ ವಶಕ್ಕೆ ಪಡೆದಿದ್ದಾರೆ. ಇನ್ನು ವಶಕ್ಕೆ ಪಡೆದು ವಿಚಾರಣೆಗೆ ಕರೆದುಕೊಂಡು ಹೋಗಲಾಗಿದೆ.