ಬೆಳಗಾವಿ : ಗಡಿ ವಿವಾದದ ಬಗ್ಗೆ ನಾಳೆ ಸುಪ್ರೀಮ ಕೋರ್ಟನಲ್ಲಿ ವಿಚಾರಣೆ ನಿಗದಿಯಾಗಿತ್ತು, ಆದರೆ ನಾಳೆ ವಿಚಾರಣೆ ನಡೆಯುವುದಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ತೀರ್ಪು ಪ್ರಕಟಿಸಬೇಕಾಗಿದ್ದ ನ್ಯಾಯಮೂರ್ತಿ ಕೆ.ಎಂ ಜೋಸೆಫ್ ಅವರಿಗೆ ಸಾಂವಿಧಾನಿಕ ಪೀಠದಲ್ಲಿ ನಿರಂತರ ಕೆಲಸವಿರುವದರಿಂದ ನಾಳೆ ವಿಚಾರಣೆ ನಡೆಸಲಾಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ನಾಳೆಯೂ ಕೂಡ ಬೆಳಗಾವಿ ಗಡಿ ವಿವಾದದ ತೀರ್ಪು ಪ್ರಕಟವಾಗುವುದಿಲ್ಲ.
ಸುಪ್ರೀಮ ಕೋರ್ಟ ತೀರ್ಪಿನ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಎಡಿಜಿಪಿ ಅಲೋಕ ಕುಮಾರ ನೇತೃತ್ವದಲ್ಲಿ ಎರಡೂ ರಾಜ್ಯಗಳ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಾಗಿತ್ತು.
ಸಭೆ ಬಳಿಕ ಮಾತನಾಡಿದ್ದ ಅಲೋಕ ಕುಮಾರ, ಸುಪ್ರೀಮ ಕೋರ್ಟನಲ್ಲಿ ನಾಳೆ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಬಗ್ಗೆ ತೀರ್ಪು ಪ್ರಕಟಿಸಿದರೂ ಏನೂ ಗಲಾಟೆ ಆಗಬಾರದು. ಹೀಗಾಗಿ ಪೊಲೀಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡಿದೆ. ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಕಾರ್ಯತಂತ್ರ ರೂಪಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ಅವರು ತಿಳಿಸಿದ್ದರು.