ಬೀದರ್: ಮೀನು ಸಾಕಾಣಿಕಾ ಹೊಂಡಕ್ಕೆ ಕಿರಾತಕರು ವಿಷ ಬೆರಸಿ ಸಾವಿರಾರು ಮೀನುಗಳ ಮಾರಣಹೋಮಕ್ಕೆ ಕಾರಣವಾಗಿರುವ ಘಟನೆ ಬೀದರನಲ್ಲಿ ನಡೆದಿದೆ.
ಬೀದರಿನ ಆಯಾಸಪುರದಲ್ಲಿ ಈ ಘಟನೆ ನಡೆದಿದೆ. ರೈತ ನಾಗಪ್ಪ ಬಂಡೆ ಎಂಬುವವರು ತಮ್ಮ ತೋಟದಲ್ಲಿ 4 ಹೊಂಡಗಳಲ್ಲಿ ಮೀನು ಸಾಕಾಣಿಕೆ ಮಾಡುತ್ತಿದ್ದರು. ಯಾರೋ ಕಿಡಿಗೇಡಿಗಳು ನಾಲ್ಕೂ ಹೊಂಡಗಳಲ್ಲಿ ವಿಷ ಬೆರೆಸಿ ಮೀನುಗಳನ್ನೆಲ್ಲ ಸಾಯಿಸಿದ್ದಾರೆ.
5000ಕ್ಕೂ ಹೆಚ್ಚು ಮೀನುಗಳು ಸಾವನ್ನಪ್ಪಿವೆ. ಬೀದರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.