ಸವದತ್ತಿ : ಗೋದಾಮೊಂದರ ಮೇಲೆ ದಾಳಿ ಮಾಡಿದ ಚುನಾವಣೆ ಅಧಿಕಾರಿಗಳು 42.92 ಲಕ್ಷ ರೂಪಾಯಿ ಮೌಲ್ಯದ ಹೊಲಿಗೆ ಯಂತ್ರ ಮತ್ತು ಟಿಫನ್ ಬಾಕ್ಸ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸೌರವ ಚೋಪ್ರಾ ಅವರಿಗೆ ಸೇರಿದ ಗೋದಾಮಿನಲ್ಲಿ ಈ ಸಾಮಗ್ರಿಗಳನ್ನು ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ. ಸೌರವ ಚೋಪ್ರಾ ಸವದತ್ತಿ ಕ್ಷೇತ್ರದಿಂದ ಜೆಡಿಎಸ್ ನಿಂದ ಸ್ಪರ್ಧೆ ಮಾಡುತ್ತಿದ್ದಾರೆ.ಮತದಾರರಿಗೆ ಹಂಚಲು ಸಂಗ್ರಹಿಸಿರಬಹುದೆಂದು ಅಂದಾಜಿಸಲಾಗಿದೆ.
ಈ ಕುರಿತು ಮಾಹಿತಿ ಪಡೆದ ಸವದತ್ತಿ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಈ ದಾಳಿ ನಡೆಸಿ 1012 ಹೊಲಿಗೆ ಯಂತ್ರಗಳು ಮೌಲ್ಯ, 23,84,272 ಹಾಗೂ ಹೊಲಿಗೆ ಯಂತ್ರಗಳ ಕೋಷ್ಟಕಗಳು 1200 ಮೌಲ್ಯದ 4,56,000 ಮತ್ತು ಹೊಲಿಗೆ ಯಂತ್ರ ಕಬ್ಬಿಣದ ಸ್ಟ್ಯಾಂಡ್ 1060 ಮೌಲ್ಯ 11,27,840 ಮತ್ತು 2160 ಟಿಫಿನ್ ಬಾಕ್ಸ್ ಗಳು 3,24,000 ಹೀಗೆ ಒಟ್ಟು 42,92,112 ಮೌಲ್ಯದ ಸಾಮಗ್ರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ತಿಳಿಸಿದ್ದಾರೆ.