ಮುಂಬೈ: ಮುಂಬೈನಲ್ಲಿ ಐಟಿ ಇಂಜಿನೀಯರಗಳಾಗಿ ಕೆಲಸ ಮಾಡುತ್ತಿರುವ ಅವಳಿ ಸಹೋದರಿಯರಿಬ್ಬರು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಮಲ್ಶಿರಾಸ್ ತಾಲೂಕಿನ ಅಕ್ಲುಜ್ ಎಂಬಲ್ಲಿ ಅತುಲ್ ಎಂಬ ಒಬ್ಬನೇ ಹುಡುಗನನ್ನು ಮದುವೆಯಾಗಿದ್ದಾರೆ.
ಈ ಮದುವೆಗೆ ಅವಳಿ ಸಹೋದರಿಯರ ಕುಟುಂಬದವರು ಹಾಗೂ ಹುಡುಗಿಯರು ಮತ್ತು ಮದುಮಗನ ಕುಟುಂಬದವರು ಒಪ್ಪಿಗೆ ನೀಡಿದ್ದರು. ಸೊಲ್ಲಾಪುರ ಜಿಲ್ಲೆಯ ಅಕ್ಲುಜ್ ಗ್ರಾಮದಲ್ಲಿ ವಿವಾಹ ನಡೆದಿದೆ.
ಮುಂಬೈನಲ್ಲಿ ಅವಳಿ ಸಹೋದರಿಯಾದ ಪಿಂಕಿ ಮತ್ತು ರಿಂಕಿ ಇಬ್ಬರೂ ಐಟಿ ಇಂಜಿನೀಯರಗಳಾಗಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಸಹೋದರಿಯರು ಒಂದೇ ಮನೆಯಲ್ಲಿ ಒಟ್ಟಿಗೆ ಬೆಳೆದು ಯಾವಾಗಲೂ ಜೊತೆಯಲ್ಲೇ ಇರುತ್ತಿದ್ದದರಿಂದ ಒಬ್ಬರನ್ನೊಬ್ಬರು ಬಿಟ್ಟಿರಲಾಗದೇ ತಾವು ಮತ್ತು ತಮ್ಮನ್ನು ಮೆಚ್ಚಿದ್ದ ಅತುಲ್ ಅವರನ್ನು ಮದುವೆಯಾಗಿದ್ದಾರೆ.
https://twitter.com/imvivekgupta/status/1599048579968270338/video/1
ಅತುಲ್ ಅವರು ಮಲ್ಶಿರಾಸ್ ತಾಲೂಕಿನ ನಿವಾಸಿಯಾಗಿದ್ದು, ಅತುಲ್ ಅವಳಿ ಸಹೋದರಿಯ ಕುಟುಂಬಕ್ಕೆ ಪರಿಚಿತರು. ಕೆಲವು ದಿನಗಳ ಹಿಂದೆ ತಂದೆ ತೀರಿಕೊಂಡ ನಂತರ ಹೆಣ್ಣು ಮಕ್ಕಳಿಬ್ಬರು ತಾಯಿಯೊಂದಿಗೆ ವಾಸವಾಗಿದ್ದರು.
ಅವರ ತಾಯಿ ಅನಾರೋಗ್ಯಕ್ಕೆ ಒಳಗಾದಾಗ, ಇಬ್ಬರು ಸಹೋದರಿಯರು ಅತುಲ್ ಅವರ ಕಾರಿನಲ್ಲಿ ಆಸ್ಪತ್ರೆಗೆ ಹೋಗಲು ಪ್ರಾರಂಭಿಸಿದರು. ಮರಾಠಿ ಆನ್ಲೈನ್ ದೈನಿಕ “ಮಹಾರಾಷ್ಟ್ರ ಟೈಮ್ಸ್” ವರದಿಯ ಪ್ರಕಾರ, ಈ ಸಮಯದಲ್ಲಿ ಅತುಲ್ ಇಬ್ಬರು ಯುವತಿಯರಿಗೆ ಹತ್ತಿರವಾದರು. ಅದು ನಂತರ ಇಬ್ಬರೂ ಸಹೋದರಿಯರು ಅತುಲ್ ಅವರನ್ನು ಮದುವೆಯಾಗುವುದರಲ್ಲಿ ಪರ್ಯವಸಾನಗೊಂಡಿತು.