ಬೆಳಗಾವಿ, ೧೫: ಬೆಂಗಳೂರಿನಿಂದ ಬೆಳಗಾವಿಗೆ ಶೀಘ್ರದಲ್ಲೇ ಆರಂಭವಾಗಲಿರುವ ವಂದೇ ಭಾರತ ರೈಲಿಗೆ ಬೆಳಗಾವಿಯ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಧಾರವಾಡದಿಂದ ಖಾನಾಪುರ ಮಾರ್ಗವಾಗಿ ಬೆಳಗಾವಿ ಬರುವ ಈ ರೈಲಿನ ವೇಗ ಹೆಚ್ಚಿದ್ದು ಇದು ದಟ್ಟ ಅರಣ್ಯ ಪ್ರದೇಶದಲ್ಲೇ ಹೋಗುವುದರಿಂದ ವನ್ಯ ಜೀವಿಗಳ ಪ್ರಾಣಕ್ಕೆ ಕುತ್ತು ತರುತ್ತದೆ. ಆದ್ದರಿಂದ ವಂದೇ ಭಾರತ ರೈಲಿನ ವೇಗ ತಗ್ಗಿಸಬೇಕು, ಇಲ್ಲದಿದ್ದರೆ ಪರ್ಯಾಯ ಮಾರ್ಗ ಕಲ್ಪಿಸುವವರೆಗೂ ಈ ರೈಲು ದಟ್ಟ ಅರಣ್ಯದ ಮಾರ್ಗವಾಗಿ ಬೆಳಗಾವಿಗೆ ಬರುವುದು ಬೇಡ ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.
ಇದರ ಬಗ್ಗೆ ಅರಣ್ಯ ಇಲಾಖೆಯ ಅನುಮತಿಯನ್ನು ರೈಲ್ವೆ ಇಲಾಖೆ ಪಡೆಯಬೇಕು ಎನ್ನುವುದೂ ಪರಿಸರವಾದಿಗಳ ವಾದವಾಗಿದೆ.