ಬೈಲಹೊಂಗಲ, ಎ. ೧೭: ಇತ್ತೀಚಿಗೆ ಜರುಗಿದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದ ಸರಕಾರಿ ಪದವಿಪೂರ್ವ ವಿದ್ಯಾಲಯ ಉತ್ತಮ ಸಾಧನೆ ಮಾಡಿದೆ.
ವಿದ್ಯಾಲಯದ ಫಲಿತಾಂಶ 93.20% ರಷ್ಟಾಗಿದ್ದು ಇತಿಹಾಸ, ಅರ್ಥಶಾಸ್ತ್ರ ಮತ್ತು ರಾಜಶಾಸ್ತ್ರ ವಿಷಯಗಳಲ್ಲಿ ಶೇ 100, ಕನ್ನಡ, ಸಮಾಜಶಾಸ್ತ್ರ ಮತ್ತು ಇಂಗ್ಲಿಷ ವಿಷಯಗಳಲ್ಲಿ ಶೇ 96.15 ಸಾಧನೆಯಾಗಿದೆ.
ಡಿಸ್ಟಿಂಕ್ಷನ್ ನಲ್ಲಿ 4, ಪ್ರಥಮ ದರ್ಜೆಯಲ್ಲಿ 16, ದ್ವಿತೀಯ ದರ್ಜೆಯಲ್ಲಿ 6 ಮತ್ತು ಇಬ್ಬರು ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಐಶ್ವರ್ಯ ಈರಪ್ಪ 91.83% ಅಂಕ ಪಡೆದು ಕಾಲೇಜಿಗೆ ಪ್ರಥಮ, ಐಶ್ವರ್ಯ ಮೋಹನ ಬಡಿಗೇರ 90.66 ಅಂಕದೊಂದಿಗೆ ದ್ವಿತೀಯ ಮತ್ತು ಪಾರವ್ವ ಶಿವಪ್ಪ ತಳವಾರ 88.66 ಅಂಕ ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಕವಿತಾ ಯು ಹಳಬನವರ 86.16% ಅಂಕ ಪಡೆದು ಕಾಲೇಜಿಗೆ ನಾಲ್ಕನೇ ಸ್ಥಾನ ಪಡೆದಿದ್ದಾಳೆ.
ವಿದ್ಯಾರ್ಥಿಗಳ ಸಾಧನೆಗೆ ಸಿಬಿಸಿ ಆಡಳಿತ ಮಂಡಳಿ, ವಿದ್ಯಾಲಯದ ಸಿಬ್ಬಂದಿ ಮತ್ತು ವಣ್ಣೂರ ಗ್ರಾಮಸ್ಥರು ಅಭಿನಂದಿಸಿದ್ದಾರೆ.