ವಿಜಯಪುರ: 7 ಕಾರ್ಮಿಕರ ಶವ ಪತ್ತೆ

A B Dharwadkar
ವಿಜಯಪುರ:  7 ಕಾರ್ಮಿಕರ ಶವ ಪತ್ತೆ

ವಿಜಯಪುರ, ೫:  ಇಲ್ಲಿನ ಅಲಿಯಾಬಾದ್ ಕೈಗಾರಿಕಾ ಪ್ರದೇಶದಲ್ಲಿರುವ ರಾಜಗುರು ಫುಡ್ಸ್ ಮೆಕ್ಕೆಜೋಳ ಸಂಸ್ಕರಣಾ ಘಟಕದಲ್ಲಿ ಸೋಮವಾರ ಸಂಜೆ ಸಂಭವಿಸಿದ ದುರಂತದಲ್ಲಿ ಮೃತರಾಗಿರುವ ಏಳು  ಕಾರ್ಮಿಕರ ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಸೋಮವಾರ ಸಂಜೆ ಅಲಿಯಾಬಾದ ಕೈಗಾರಿಕಾ ಪ್ರದೇಶದಲ್ಲಿರುವ ರಾಜಗುರು ಆಹಾರ ಸಂಸ್ಕರಣಾ ಘಟಕದಲ್ಲಿ ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾಗ ಮೆಕ್ಕೆ ಜೋಳ ಸಂಸ್ಕರಣ ಘಟಕ ಕುಸಿದು ಕಾರ್ಮಿಕರು ಸಿಲುಕಿ ಹಾಕಿಕೊಂಡಿದ್ದರು. ಆಗ ರಕ್ಷಣಾ ಕಾರ್ಯಾಚರಣೆ ನಡೆಸಿ ಓರ್ವನನ್ನು ರಕ್ಷಿಸಲಾಗಿತ್ತು. ಪುಣೆಯ ಎನ್ ಡಿ ಆರ್ ಎಫ್ ಸೇರಿದಂತೆ ನಾನಾ ರಕ್ಷಣಾ ತಂಡಗಳು ಕಾರ್ಮಿಕರ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿವೆ. ಇಡೀ ರಾತ್ರಿ ಕಾರ್ಯಾಚರಣೆ ಬಳಿಕ ಐವರು ಕಾರ್ಮಿಕರು ಶವವಾಗಿ ಪತ್ತೆಯಾಗಿದ್ದಾರೆ.

ಮೆಕ್ಕೆ ಜೋಳ ಸಂಸ್ಕರಣಾ ಯಂತ್ರಗಳು ಜೋಳದಿಂದ ತುಂಬಿದ ಫನಲ್‌ಗಳನ್ನು ಹೊಂದಿದ್ದು,ಅವು ತುಂಬಾ ಭಾರವಾಗಿರುತ್ತದೆ.ಅದು ಭಾಗಶಃ ಕುಸಿದು ಬಿದ್ದಾಗ 
100 ಟನ್ ಮೆಕ್ಕೆಜೋಳದ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸಿಲುಕಿಕೊಂಡರು.ಜೋಳದ ಕೆಳಗೆ ಸಿಲುಕಿಕೊಂಡಿದೆ.

ಮೃತರನ್ನು ಬಿಹಾರ ಮೂಲದ ರಾಜೇಶ ಮುಖಿಯಾ (25), ರಾಮ್ರೀಜ ಮುಖಿಯಾ (29), ಸಂಬೂ ಮುಖಿಯಾ (26), ರಾಮ ಬಾಲಕ (52), ಲುಖೋ ಜಾಧವ (45) ಎಂದು ಗುರುತಿಸಲಾಗಿದೆ. ಇನ್ನೂ ಸುಮಾರು 9 ಕಾರ್ಮಿಕರು ಅಪಾಯದಲ್ಲಿ ಸಿಲುಕಿದ್ದು, ಅವರ ರಕ್ಷಣೆ ಕಾರ್ಯಾಚರಣೆ ಮುಂದುವರೆದಿದೆ. ಈ‌ ಮಧ್ಯೆ ಘಟನೆಯ ಮಾಹಿತಿ ತಿಳಿಯುತ್ತಲೇ ಬೆಳಗಾವಿ ಅಧಿವೇಶನದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಡರಾತ್ರಿ ಸ್ಥಳಕ್ಕೆ ಆಗಮಿಸಿದಾಗ ಸಚಿವರ ಆಗಮನದ ಸುದ್ದಿ ತಿಳಿದ ಬಿಹಾರ ಮೂಲದ ಕಾರ್ಮಿಕರು ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿ, ಪ್ರತಿಭಟನೆಗೆ ಮುಂದಾದರು. ತ್ವರಿತವಾಗಿ ತಮ್ಮವರನ್ನು ರಕ್ಷಿಸಬೇಕು, ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ಈ ಹಿಂದೆ ದುರಂತದಲ್ಲಿ ನಮ್ಮವರು ಮೃತರಾದಾಗ ಪರಿಹಾರ ನೀಡಿಲ್ಲ. ಅವರ ಕುಟುಂಬಗಳಿಗೂ ಪರಿಹಾರ ನೀಡಬೇಕು. ಬಳಿಕವೇ ಶವಗಳನ್ನು ಸಾಗಿಸುವ, ಹಸ್ತಾಂತರಿಸುವ ಕೆಲಸ ಮಾಡಬೇಕು ಎಂದು ಪಟ್ಟು ಹಿಡಿದರು.

ಅಪಾಯದಲ್ಲಿ ಸಿಲುಕಿರುವವರ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತದೆ. ಮೃತ ಕಾರ್ಮಿಕರಿಗೆ ಕೈಗಾರಿಕಾ ಘಟಕದ ಮಾಲೀಕರು ಪರಿಹಾರ ನೀಡಲೇಬೇಕು. ಈ ವಿಷಯದಲ್ಲಿ ಕ್ರಮ ಕೈಗೊಳ್ಳುತ್ತೇನೆ. ಸದರಿ ಘಟನೆಯಲ್ಲಿ ಮೃತರ ಕುಟುಂಬಗಳಿಗೆ ಸರ್ಕಾರದಿಂದಲೂ ಪರಿಹಾರ ಕೊಡಿಸುವ ಕುರಿತು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ಗಾಯಾಳು ಕಾರ್ಮಿಕರಿಗೆ ಚಿಕಿತ್ಸೆ ಕೊಡಿಸಲಾಗುತ್ತದೆ ಎಂದು ಪ್ರತಿಭಟನಾ ನಿರತ ಬಿಹಾರ ಕಾರ್ಮಿಕರಿಗೆ ಎಂ.ಬಿ.ಪಾಟೀಲ ಭರವಸೆ ನೀಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.