ಮುಂಬೈ: ನದಿ ಸೇತುವೆಯ ಮೇಲೆ ಸೆಲ್ಫಿ ತೆಗೆದುಕೊಳ್ಳುವಾಗ ಆಯತಪ್ಪಿ ಒಂದೇ ಕುಟುಂಬದ ನಾಲ್ವರು ಹುಡುಗಿಯರು ಕಾಲು ಜಾರಿ ನದಿಯಲ್ಲಿ ಬಿದ್ದು ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನಿಬ್ಬರು ಈಜುತ್ತಾ ಪ್ರಾಣ ಉಳಿಸಿಕೊಂಡ ಘಟನೆ ವಿರಾರ್ ಪ್ರದೇಶದ ವೈತ್ರಾನ್ ಜಟ್ಟಿಯಲ್ಲಿ ನಡೆದಿದೆ.
ನಾಲ್ವರು ಹುಡುಗಿಯರು ನದಿ ದಡಕ್ಕೆ ವಾಯು ವಿಹಾರಕ್ಕೆ ಬಂದಿದ್ದಾರೆ. ಈ ವೇಳೆ ಸೆಲ್ಫಿ ತೆಗೆದುಕೊಳ್ಳುತ್ತಿರುವಾಗ ಇಬ್ಬರು ನೀರಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಇನ್ನಿಬ್ಬರು ಹುಡುಗಿಯರು ನೀರಿಗೆ ಇಳಿದಾಗ ಅವರು ನದಿಯಲ್ಲಿ ಮುಳುಗಿದ್ದಾರೆ. ಬಳಿಕ ಇನ್ನಿಬ್ಬರು ಈಜುತ್ತಾ ದಡ ಸೇರಿದ್ದಾರೆ.
ನದಿಯಲ್ಲಿ ಮುಳುಗಿದ ಹುಡುಗಿಯರಿಗೆ ಈಜು ಬಾರದ ಕಾರಣ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಈಜುಗಾರರು ಎರಡು ಹುಡುಗಿಯರ ಮೃತದೇಹಗಳನ್ನು ಕಾರ್ಯಾಚರಣೆ ನಡೆಸಿ ಹೊರತೆಗೆದಿದ್ದಾರೆ.