ಹೊಸದಿಲ್ಲಿ : ಮೂನ್ ಲೈಟಿಂಗ್ ಕಾರಣ ವಿಪ್ರೋ ಕಂಪನಿ 300 ಉದ್ಯೋಗಿಗಳನ್ನು ವಜಾಗೊಳಿಸಿದೆ. ಕಳೆದ ಕೆಲವು ತಿಂಗಳಿನಿಂದ ವಿಪ್ರೋದ ಸುಮಾರು 300 ಉದ್ಯೋಗಿಗಳು ತಮ್ಮ ಕಂಪನಿ ಜೊತೆಗೆ ಇತರೆ ಕಂಪನಿಗಳಲ್ಲಿ ಸಹ ಕೆಲಸ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿತ್ತು.
ಈ ಹಿನ್ನೆಲೆಯಲ್ಲಿ 300 ಉದ್ಯೋಗಿಗಳನ್ನು ವಜಾಗೊಳಿಸಿದೆ. ಅಂತಹ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಕಂಪನಿಯಲ್ಲಿ ಸ್ಥಾನವಿಲ್ಲ ಎಂದು ರಿಷದ್ ಪ್ರೇಮಜಿ ಸ್ಪಷ್ಟಪಡಿಸಿದರು.
ಇಂದು ವಿಪ್ರೋದಲ್ಲಿ ಕೆಲಸ ಮಾಡುವವರು ಮತ್ತು ನಮ್ಮ ಪ್ರತಿಸ್ಪರ್ಧಿಯೊಬ್ಬರೊಂದಿಗೆ ನೇರವಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ನಿಖರವಾಗಿ 300 ಜನರನ್ನು ಕಂಡುಹಿಡಿಯಲಾಗಿದೆ. ಅಂತಹವರನ್ನು ವಜಾ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.