ಬೆಳಗಾವಿ, ಜೂನ್ 2- ಕಾಂಗ್ರೆಸ್ ಎಸ್ ಸಿ ಘಟಕದ ರಾಜ್ಯ ಸಂಚಾಲಕ ಗಜು (ಶ್ರವಣಕುಮಾರ) ಧರನಾಯಕ ಅವರ ತಂದೆ ಶ್ರೀ ಯಮನಪ್ಪ ಧರನಾಯಕ ಅವರು ನಿಧನರಾದರು ಎಂದು ತಿಳಿಸಲು ದು:ಖವಾಗುತ್ತಿದೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.
ವಯೋಸಹಜ ಕಾಯಿಲೆಯಿಂದ ಇಲ್ಲಿಯ ಶಿವಬಸವ ನಗರದ ನಿವಾಸದಲ್ಲಿ ಇಂದು ಬೆಳಿಗ್ಗೆ ಅವರು ಕೊನೆಯುಸಿರೆಳೆದರು. ಶಿಕ್ಷಣ ಇಲಾಖೆಯ ನಿವೃತ್ತ ಸಿಬ್ಬಂದಿಯಾಗಿದ್ದ ಮೃದು ಸ್ವಭಾವದ ಅವರು, ಬದುಕಿನುದ್ದಕ್ಕೂ ಆದರ್ಶಜೀವಿಯಾಗಿ ಬಾಳಿದರು.
ಮೂಲತ: ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದವರಾದ ಯಮನಪ್ಪ ಧರನಾಯಕ ಅವರು, ಮೂವರು ಪುತ್ರರು, ಓರ್ವ ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಸದಾಶಿವನಗರದ ಸ್ಮಶಾನದಲ್ಲಿ ಜರುಗಲಿದೆ.