ದೊಡ್ಡಬಳ್ಳಾಪುರ: ನರೇಂದ್ರ ಮೋದಿ aವರು ಪ್ರಧಾನಿಯಾಗಿ ಇರುವ ವರೆಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಬಿಡುವುದಿಲ್ಲ. ಬಿಜೆಪಿ ಆಡಳಿತ ಸರ್ಕಾರ ಮುಂದುವರೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಸವಾಲ್ ಹಾಕಿದ್ದಾರೆ.
ಇಂದು ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಬಿಜೆಪಿ ಹೆಚ್ಚು ಶಕ್ತಿಯುತವಾಗಿ ಬೆಳೆಯದೇ ಇದ್ದ ಸಂದರ್ಭದಲ್ಲಿ ಸಚಿವ ಸುಧಾಕರ ಮೂರು ನಾಲ್ಕು ಲಕ್ಷ ಜನ ಸೇರುವಂತೆ ಜನಸ್ಪಂದನ ಕಾರ್ಯಕ್ರಮ ಮಾಡಿದ್ದಾರೆ. ಈ ಭಾಗದಲ್ಲಿ ಮುಂದೆ ಹೆಚ್ಚಿನ ಬಿಜೆಪಿ ಶಾಸಕರು ಗೆದ್ದು ಬಿಜೆಪಿ ಸರ್ಕಾರ ರಚನೆ ಮಾಡುತ್ತೇವೆ ಎಂಬುದಾಗಿ ಹೇಳುತ್ತೇನೆ ಎಂದರು.
ರಾಹುಲ್ ಗಾಂಧಿಯವರು ಬಡತನದ ಬಗ್ಗೆ ಮಾತನಾಡುವುದಕ್ಕೆ ಶುರು ಮಾಡಿದ್ದಾರೆ. ಅವರ ಮನೆಯಲ್ಲಿಯೇ ಮೂರು ಜನರು ಪ್ರಧಾನಿಯಾಗಿ ಹೋಗಿದ್ದಾರೆ. ಆದ್ರೇ ಬಡತನ ನಿವಾರಣೆಯಾಗಿಲ್ಲ. ಮೋದಿ ಪ್ರಧಾನಿಯಾದ ನಂತರ ಈ ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗುತ್ತಿದೆ.
ನಾನು ವಿಧಾನಮಂಡಲದಲ್ಲಿ ನಿಂತು ಹೇಳಿದ್ದೆ. ಸಿದ್ಧರಾಮಯ್ಯನವರೇ ಎಲ್ಲಿಯವರೆಗೆ ಈ ದೇಶದ ಪ್ರಧಾನಿಯಾಗಿ ಮೋದಿ ಇರುತ್ತಾರೋ ಅಲ್ಲಿಯವರೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರೋದಕ್ಕೆ ಬಿಡೋದಿಲ್ಲ. ಈ ಮಾತು ಮತ್ತೊಮ್ಮೆ ಹೇಳುತ್ತೇನೆ ಎಂದರು.