ಬೆಳಗಾವಿ, ೧: ರವಿವಾರ ರಾತ್ರಿ ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಂಡು ಸ್ನೇಹಿತರೊಂದಿಗೆ ಸಂಭ್ರಮಿಸಿದ್ದ ಯುವಕನೊಬ್ಬ ಸೋಮವಾರ ಸೂರ್ಯೋದಯಕ್ಕೆ ಮುಂಚೆ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದಾಗ ಬೈಕ್ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಅಸುನೀಗಿದ ಘಟನೆ ಕಾಲೇಜು ರಸ್ತೆಯಲ್ಲಿ ಸಂಭವಿಸಿದೆ.
ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದ 24 ವರುಷದ ಪಂಕಜ ಎಂಬವರು ತಮ್ಮ ಸ್ನೇಹಿತರೊಂದಿಗೆ ಹೋಟೆಲೊಂದರಲ್ಲಿ ನೂತನ ವರ್ಷಾಚರಣೆ ಪಾರ್ಟಿ ಮಾಡಿ ಸ್ನೇಹಿತನೊಂದಿಗೆ ಮರಳಿ ಮನೆಗೆ ತೆರಳಿದ್ದಾಗ ಬೈಕ್ ರಸ್ತೆ ದ್ವಿಭಾಜಕಕ್ಕೆ ಡಿಕ್ಕಿ ಹೊಡೆದು ಇಬ್ಬರೂ ಹಾರಿ ಬಿದ್ದಿದ್ದಾರೆ. ಆಗ ಪಂಕಜ ಅವರ ತಲೆಗೆ ತೀವ್ರ ಪೆಟ್ಟಾಗಿ ಅತಿಯಾದ ರಕ್ತಸ್ರಾವವಾಗಿ ಸ್ಥಳದಲ್ಲೇ ಕೊನೆಯುಸಿರೆಳೆದರು. ಅವರೊಂದಿಗಿದ್ದ ಇನ್ನೊಬ್ಬ ಯುವಕ ಸಹ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಖಡೇಬಜಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.