ಬಳ್ಳಾರಿ, ೧೩- ಮೆಂಥೋಪ್ಲಸ್ ಮುಲಾಮಿನ ಚಿಕ್ಕ ಡಬ್ಬಿ ನುಂಗಿ ಒಂಭತ್ತು ತಿಂಗಳ ಮಗು ಸಾವಿಗೀಡಾದ ಘಟನೆ ಕಂಪ್ಲಿ ತಾಲೂಕಿನ ಇಂದಿರಾನಗರದಲ್ಲಿ ನಡೆದಿದೆ.
ಪ್ರಿಯದರ್ಶಿನಿ ಎಂಬ ಮೃತ ಮಗು ರಾಘವೇಂದ್ರ ಹಾಗೂ ತುಳಸಿ ದಂಪತಿಗೆ ಸೇರಿದ್ದು ಮೃತ ಮಗು ಆಟವಾಡುವಾಗ ಮೆಂಥೋಪ್ಲಸ್ ಕೈಗೆ ಸಿಕ್ಕಿದೆ. ಆಡುತ್ತ ಮೆಂಥೋಪ್ಲಸ್ ಡಬ್ಬಿಯನ್ನು ಮಗು ನುಂಗಿದ್ದು ಬಳಿಕ ಮಗುವಿಗೆ ಉಸಿರಾಟ ತೊಂದರೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಪೋಷಕರು ಕೂಡಲೇ ಮಗುವನ್ನು ಖಾಸಗಿ ವೈದ್ಯರ ಬಳಿಗೆ ಕರೆದುಕೊಂಡು ಹೋದರಾದರೂ ಈ ವೇಳೆ ಮಗುವನ್ನು ತಪಾಸಣೆ ಮಾಡಿದ ವೈದ್ಯರು, ಮಗುವು ಮಾರ್ಗಮಧ್ಯೆಯೇ ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.