ಬೆಂಗಳೂರು: ಮಾದಕ ವ್ಯಸನಿಯೊಬ್ಬ ತನ್ನ ಪತ್ನಿಯನ್ನು ಗೆಳೆಯರೊಂದಿಗೆ ಮಲಗಿಸಿ ವಿಡಿಯೋ ಚಿತ್ರೀಕರಿಸಿ ವಿಕೃತಿ ಮೆರೆಯುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಪತಿಯನ್ನು ಸಂಪಿಗೆಹಳ್ಳಿ ನಿವಾಸಿ ಜಾನ್ ಪಾಲ್ ಎಂದು ಹೇಳಲಾಗಿದ್ದು ಈತನನ್ನು ಮಹಿಳಾ ಸಾಫ್ಟವೇರ್ ಇಂಜನೀಯರರೊಬ್ಬರು 2011ರ ಏಪ್ರಿಲ್ನಲ್ಲಿ ವಿವಾಹವಾಗಿದ್ದಾರೆ. ನಾಲ್ಕು ವರ್ಷ ಸುಮ್ಮನಿದ್ದ ಪತಿ 2015 ರಿಂದ ಗೆಳೆಯರೊಂದಿಗೆ ಪತ್ನಿಯನ್ನು ಮಲಗಿಸಿ ತನ್ನ ವಿಕೃತಿ ಮೆರೆದಿದ್ದಾನೆ. ಆರೋಪಿ ಪತಿ ಜಾನ್ಪಾಲ್, ಮನೆಗೆ ಆತನ ಗೆಳೆಯರನ್ನು ಕರೆದು ಪಾರ್ಟಿ ಮಾಡಿ ನಂತರ ಗೆಳೆಯರೊಂದಿಗೆ ದೈಹಿಕ ಸಂಪರ್ಕ ನಡೆಸಲು ಒತ್ತಾಯಿಸುತ್ತಿದ್ದ. ಪತಿಗೆ ಹೆದರಿ ಆತನ ಗೆಳೆಯರೊಂದಿಗೆ ಆಕೆ ದೈಹಿಕ ಸಂಪರ್ಕ ಮಾಡುತ್ತಿದ್ದಳು ಎಂದು ಹೇಳಿದ್ದಾಳೆ.
ಪತಿ ಜಾನ್ ಪಾಲ್ ಹಲ್ಲೆ ನಡೆಸಿ ಬಲವಂತ ಮಾಡಿದ್ದಾನೆ. ಪತಿಯ ಏಟನ್ನು ತಾಳಲಾಗದೇ ಮನೆಗೆ ಬರುತ್ತಿದ್ದ ಗೆಳೆಯರೊಂದಿಗೆ ದೈಹಿಕ ಸಂಪರ್ಕ ನಡೆಸುತ್ತಿದ್ದಳು. ಅದರಂತೆ ಪಾರ್ಟಿಗಾಗಿ ಮನೆಗೆ ಬರುತ್ತಿದ್ದ ಸ್ನೇಹಿತರಾದ ಸಾಜೀಶ ಹಾಗೂ ನಾಜಿ ಎಂಬುವವರ ಜೊತೆ ಜಾನ್ ಪಾಲ್ ತನ್ನ ಪತ್ನಿಯನ್ನು ಮಲಗಿಸಿದ್ದಾನೆ. ತನ್ನ ಸ್ವಂತ ಪತ್ನಿಯನ್ನು ಗೆಳೆಯರೊಂದಿಗೆ ಮಲಗಿಸಿದ ಜಾನ್ ಪಾಲ್ ದೈಹಿಕ ಸಂಪರ್ಕದ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ.
ಇಷ್ಟಕ್ಕೂ ಸುಮ್ಮನಾಗದ ಆತ ಪತ್ನಿಯ ತಂಗಿಗೆ ತನ್ನೊಡನೆ ಮಲಗುವಂತೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಗಂಡನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಪತಿಗೆ ವಿಚ್ಛೇದನ ನೀಡಲು ಆಕೆ ಮುಂದಾಗಿದ್ದಾಳೆ. ಈ ವೇಳೆ ಪತ್ನಿ ತನ್ನ ಗೆಳೆಯರೊಂದಿಗಿನ ಅಶ್ಲೀಲ ಪೊಟೋ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಲು ಆರಂಭಿಸಿದ್ದಾನೆ.
ಕೊನೆಗೆ ಗಂಡನ ಕಾಟ, ಕಿರುಕುಳ, ಲೈಂಗಿಕ ದೌರ್ಜನ್ಯ ಮುಂದುವರಿದ ಕಾರಣ ಗಟ್ಟಿ ಮನಸ್ಸು ಮಾಡಿ ಪತಿಯ ವಿರುದ್ಧ ಪತ್ನಿ ಠಾಣೆ ಮೆಟ್ಟಿಲೇರಿ ಪತಿಯ ಹೇಯ ಕೃತ್ಯದ ಬಗ್ಗೆ ದೂರು ನೀಡಿದ್ದಾಳೆ. ಅಲ್ಲದೇ ಆತನೊಬ್ಬ ಗಾಂಜಾ ವ್ಯಸನಿಯಾಗಿದ್ದು, ಮನೆಯಲ್ಲಿಯೇ ಗಾಂಜಾ ಸಸಿಗಳನ್ನು ಹೂಕುಂಡಗಳಲ್ಲಿ ಬೆಳೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾಳೆ.
ದೂರಿನ ಅನ್ವಯ ಸಂಪಿಗೆಹಳ್ಳಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದೂರಿನನ್ವಯ ಲೈಂಗಿಕ ಕಿರುಕುಳ, ಎನ್.ಡಿ.ಪಿ.ಎಸ್ ಹಾಗೂ ಐಟಿ ಆಕ್ಟ್ ಅಡಿ ಕೇಸ್ ದಾಖಲು ಮಾಡಲಾಗಿದೆ.