ಬೆಳಗಾವಿ : ತಾಲೂಕಿನ ಕಾಕತಿಯ ಲಕ್ಷಿ ನಗರದಲ್ಲಿ ಬೆತ್ತಲೆಯಾಗಿ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥನೊಬ್ಬನನ್ನು ಸಾಮಾಜಿಕ ಸೇವಾ ಸಂಸ್ಥೆ ಡಿವೈನ್ ಹೆಲ್ಪಿಂಗ್ ಹ್ಯಾಂಡ್ಸ್ ಗ್ರೂಪನ ಗಜಾನನ ಗವಾನೆ ಉಪಚರಿಸಿ ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಶನಿವಾರ ಲಕ್ಷ್ಮೀನಗರದಲ್ಲಿ ಮಾನಸಿಕ ಅಸ್ವಸ್ಥ ಪುರುಷ ಬೆತ್ತಲೆಯಾಗಿ ತಿರುಗಾಡುತ್ತಿದುದನ್ನು ಕಂಡು ಜನರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಮನೋಹರ ಶೇಖರಗೋಳ ಹಾಗೂ ಸುಹಾಸ ಲೋಹರ್, ಸಮಾಜ ಸೇವಕ, ಗ್ರಾಮ ಪಂಚಾಯತ್ ಸದಸ್ಯರೂ ಆಗಿರುವ ಡಿವೈನ್ ಹೆಲ್ಪಿಂಗ್ ಹ್ಯಾಂಡ್ಸ್ ಗ್ರುಪ್ ನ ಗವಾನೆ ಅವರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಗವಾನೆ ಅವರು, ಚರಂಡಿ ನೀರಿನಲ್ಲಿ ಮಲಗಿದ್ದ ವ್ಯಕ್ತಿಯನ್ನು ಹೊರಗೆ ತಂದು, ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಂಬ್ಯುಲೆನ್ಸಗೆ ಕರೆ ಮಾಡಿ ಆತನನ್ನು ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾಕತಿ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ ಹುಲಕುಂದ ಹಾಗೂ ಬೀಟ ಪೊಲೀಸ್ ಯಲ್ಲಪ್ಪ ಮುರಗಟ್ಟಿ ಈ ವೇಳೆ ಸಹಾಯ ಮಾಡಿದ್ದಾರೆ. ಸಾಮಾಜಿಕ ಕಾರ್ಯಕರ್ತ ಅವಧೂತ ತುಡೇವೇಕರ ಅವರು ಮಾನಸಿಕ ಅಸ್ವಸ್ಥನನ್ನು ಸೇರಿಸುವ ವೇಳೆ ಅನುಕೂಲ ಮಾಡಿಕೊಟ್ಟಿದ್ದಾರೆ.