ರಾಯಚೂರು : ಮನೆಯ ತೋಟದ ಬಾವಿಯಲ್ಲಿನ ಮೀನುಗಳಿಗೆ ಆಹಾರ ಹಾಕಲು ಹೋಗಿದ್ದ ಯುವತಿ ಆಯತಪ್ಪಿ ಬಾವಿಗೆ ಬಿದ್ದಿರುವ ಘಟನೆ ಜಿಲ್ಲೆಯ ಮಸ್ಕಿ ತಾಲ್ಲೂಕು ಕುಣಿಕೆಲ್ಲೂರು ಗ್ರಾಮದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು 18 ವರುಷದ ಮೇಘಾ ಅರಳಹಳ್ಳಿ ಎಂದು ಗುರುತಿಸಲಾಗಿದೆ. ಬಾವಿಯಲ್ಲಿ ಬಿದ್ದು ಗುರುವಾರ ಮುಂಜಾನೆರವರೆಗೂ ಪತ್ತೆಯಾಗದ ವಿದ್ಯಾರ್ಥಿನಿಯ ಪತ್ತೆ ಕಾರ್ಯಾಚರಣೆ ಆಗ್ನಿ ಶಾಮಕ ಸಿಬ್ಬಂದಿ ಹಾಗೂ ಮಸ್ಕಿ ಪೊಲೀಸರು ಮಾಡುತ್ತಿದ್ದಾರೆ.
ರಾತ್ರಿ ಮನೆಯಲ್ಲಿ ಊಟದ ಬಳಿಕ ನಂತರ ಮಿಕ್ಕ ಆಹಾರವನ್ನು ಮೀನಿಗೆ ಹಾಕಲು ಬಾವಿಗೆ ತೆರಳಿದ್ದ ಸಂದರ್ಭದಲ್ಲಿ ಕಾಲು ಜಾರಿ ಮೇಘಾ ಬಾವಿಗೆ ಬಿದ್ದಿದ್ದಾಳೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.