ನವದೆಹಲಿ: ಶ್ರದ್ಧಾ ವಾಲ್ಕರ್ ಳನ್ನು ಭಯಂಕರವಾಗಿ ಹತ್ಯೆಗೈದು ಮೃತದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ ದೆಹಲಿಯ ಅರಣ್ಯದಾದ್ಯಂತ ಬಿಸಾಕಿ ವಿಕೃತಿ ಮೆರೆದಿದ್ದ ಆಕೆಯ ಪ್ರಿಯತಮ ಅಫ್ತಾಬ ಪೂನಾವಾಲ ವಿಚಾರಣೆ ತೀವ್ರಗೊಂಡಿರುವಾಗಲೇ ದೆಹಲಿಯಲ್ಲಿ ಮತ್ತೊಂದು ಭೀಭತ್ಸ ಕೃತ್ಯ ಬೆಳಕಿಗೆ ಬಂದಿದೆ.
ಪತ್ನಿ ಹಾಗೂ ಮಗ ಸೇರಿ ಪತಿಯನ್ನೇ ಕೊಂದು ಶವವನ್ನು 22 ತುಂಡುಗಳನ್ನಾಗಿ ಕತ್ತರಿಸಿ ಬಿಸಾಕಿರುವ ಘಟನೆ ದೆಹಲಿಯ ಪಾಂಡವನಗರದಲ್ಲಿ ನಡೆದಿದೆ.
ಶ್ರದ್ಧಾ ಹತ್ಯೆಯ ಮಾದರಿಯಲ್ಲಿಯೇ ಮಹಿಳೆಯೊಬ್ಬಳು ತನ್ನ ಪತಿಯನ್ನು ಹತ್ಯೆ ಮಾಡಿದ್ದಾಳೆ. ಅಂಜನ್ ದಾಸ್ ಎಂಬಾತನನ್ನು ಆಕೆಯ ಪತ್ನಿ ಹಾಗೂ ಮಗ ಸೇರಿ ಭೀಕರವಾಗಿ ಹತ್ಯೆ ಮಾಡಿದ್ದು, ಬಳಿಕ ಶವವನ್ನು 22 ತುಂಡುಗಳನ್ನಾಗಿ ಪೀಸ್ ಮಾಡಿ ಕವರ್ ನಲ್ಲಿ ಸುತ್ತಿ ಫ್ರಿಡ್ಜ್ ನಲ್ಲಿ ಇಟ್ಟಿದ್ದರು. ಬಳಿಕ ಪ್ರತಿ ದಿನ ರಾತ್ರಿ ಒಂದೊಂದೇ ತುಂಡುಗಳನ್ನು ಮನೆಯಿಂದ ಹೊರಗೆ ತೆಗೆದುಕೊಂಡು ಹೋಗಿ ಹತ್ತಿರದ ಮೈದಾನದಲ್ಲಿ ಬಿಸಾಕುತ್ತಿದ್ದರು.
ಜೂನ್ 1ರಂದು ಮೃತದೇಹದ ತುಂಡು ಎಸೆಯುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.