ಧಾರವಾಡ : ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಐ.ಟಿ.ಐ ಕಾಲೇಜಿನಲ್ಲಿ ಧಾರವಾಡ ಸಂಚಾರ ಪೋಲಿಸ್ ಠಾಣೆಯ ವತಿಯಿಂದ ವೇಗದ ಚಾಲನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಂಚಾರ ಠಾಣೆ ಪಿ.ಎಸ್.ಐ ವೀರೇಶ ಬಳ್ಳಾರಿ ಅವರು, ವಿದ್ಯಾರ್ಥಿಗಳಿಗೆ ರಸ್ತೆ ನಿಯಮಾವಳಿ ಹಾಗೂ ಅತಿವೇಗದ ಚಾಲನೆ ಕುರಿತಾಗಿ ಜಾಗೃತಿ ಮೂಡಿಸಿದರು. ಎಸ್. ಬಿ. ಶಿಂಧೆ, ಮಹೇಶ ಉಪಸ್ಥಿತರಿದ್ದರು. ವಿನಾಯಕ ಗವಳಿ ನಿರೂಪಿಸಿದರು. ಮಂಜುನಾಥ ಚಟ್ಟೇರ ವಂದಿಸಿದರು.

